ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಮ್ ಇಂಡಿಯಾದ ಬೌಲರ್ ಮೊಹಮ್ಮದ್ ಸಿರಾಜ್ಗೆ ತೆಲಂಗಾಣ ಸರಕಾರವು ನಿವೇಶನ ಮಂಜೂರು ಮಾಡಿದೆ. ಜುಬಿಲಿ ಹಿಲ್ಸ್‌ನ ರಸ್ತೆ ಸಂಖ್ಯೆ 78 ರಲ್ಲಿ 600 ಚದರ ಭೂಮಿಯನ್ನು ಮಂಜೂರು ಮಾಡುವ ಆದೇಶ ಮಾಡಿದೆ.
ಸಿರಾಜ್ ಅವರೊಂದಿಗೆ, ಶೂಟರ್ ಇಶಾ ಸಿಂಗ್ ಮತ್ತು ಎರಡು ಬಾರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್ ನಿಖತ್ ಜರೀನ್ ಅವರಿಗೂ ಹೈದರಾಬಾದ್ನಲ್ಲಿ ತಲಾ 600 ಚದರಗಳಷ್ಟು ಮನೆ ನಿವೇಶನಗಳನ್ನು ನೀಡುವುದಾಗಿ ಸರ್ಕಾರ ಘೋಷಿಸಿದೆ.
ಜುಲೈ 31 ರಂದು ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಅವರು ಸಿರಾಜ್ ಅವರಿಗೆ ನಗರದಲ್ಲಿ ಮನೆ ನಿವೇಶನ ಮಂಜೂರು ಮಾಡುವುದಾಗಿ ಘೋಷಿಸಿದ್ದರು. ಸಿರಾಜ್ ಮತ್ತು ನಿಖತ್ಗೆ ಕ್ರೀಡೆಗೆ ನೀಡಿದ ಕೊಡುಗೆಗಾಗಿ ಸರ್ಕಾರವು ಈಗಾಗಲೇ ಗ್ರೂಪ್-1 ಉದ್ಯೋಗಗಳನ್ನು ನೀಡಿದೆ.
ನಿಖತ್ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಮಹಿಳೆಯರ 50 ಕೆಜಿ ಬಾಕ್ಸಿಂಗ್ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋಲು ಕಂಡು ತಮ್ಮ ಅಭಿಯಾನವನ್ನು ಮುಗಿಸಿದ್ದರು. ಮೊಹಮ್ಮದ್ ಸಿರಾಜ್ ಟಿ20 ವಿಶ್ವಕಪ್ ಗೆದ್ದ ತಂಡದ ಸದಸ್ಯರಾಗಿದ್ದರು.