ಮೆಗಾ- ಪವರ್‌ ಸ್ಟಾರ್‌ ನಟನೆಯ ಆಚಾರ್ಯ ರಿಲೀಸ್:‌ ಫ್ಯಾನ್ಸ್‌ ಅಬ್ಬರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೆಗಾ-ಪವರ್‌, ಸ್ಟಾರ್ ಡೈರೆಕ್ಟರ್ ಕಾಂಬಿನೇಷನ್‌ ಸಾಕಷ್ಟು ಕ್ರೇಜ್‌ ಹುಟ್ಟು ಹಾಕಿದ್ದ ʻಆಚಾರ್ಯʼ ಸಿನಿಮಾ ತೆರೆಗೆ ಅಪ್ಪಳಿಸಿದೆ. ‘ಪ್ರೆಸೆಂಟ್ ಪ್ಯಾನ್ ಇಂಡಿಯಾ, ಪ್ಯಾನ್ ಇಂಡಿಯಾ’ ಎಂದು ಜಪಿಸುತ್ತಿರುವಾಗ.ಈ ಮೆಗಾ ಸಿನಿಮಾ ನೇರವಾಗಿ ತೆಲುಗು ಪ್ರೇಕ್ಷಕರನ್ನು ಗುರಿಯಾಗಿಸಿಕೊಂಡು ಬಂದಿದೆ.

ಮೆಗಾಸ್ಟಾರ್ ಚಿರಂಜೀವಿ ಮತ್ತು ಮೆಗಾ ಪವರ್ ಸ್ಟಾರ್ ರಾಮ್ ಚರಣ್ ತೇಜ್ ಕಾಂಬಿನೇಷನ್ ನಲ್ಲಿ ಬಂದ ಆಚಾರ್ಯ. ತೆಲುಗಿನಲ್ಲಿ ಬಿಗ್ ಸೆನ್ಸೇಷನ್ ಕ್ರಯೇಟ್‌ ಮಾಡುವುದರಲ್ಲಿದೆ. ಅಪ್ಪ-ಮಗ ಒಂದೇ ಸಿನಿಮಾದಲ್ಲಿ ಕಾಣಿಸಿಕೊಂಡರೆ ಅಭಿಮಾನಿಗಳಿಗೆ ಹಬ್ಬ. ಒಂದೇ ಒಂದು ಫ್ಲಾಪ್ ಇಲ್ಲದ ಕೊರಟಾಲ ಶಿವ ನಿರ್ದೇಶನದಲ್ಲಿ ಮೆಗಾ ಹೀರೋಗಳು ಬಂದಿದ್ದಾರೆಂದು ಪ್ರೇಕ್ಷಕರು ಹಿರಹಿರಿ ಹಿಗ್ಗಿದ್ದಾರೆ. ಇಂದು ಆಚಾರ್ಯ ಸಿನಿಮಾ ತೆಲುಗು ಭಾಷೆಯಲ್ಲಿ 1,500 ಕ್ಕೂ ಹೆಚ್ಚು ಪರದೆಗಳಲ್ಲಿ ಬಿಡುಗಡೆಗೊಂಡಿದೆ.

ಸುಮಾರು 200 ಕೋಟಿ ಬಜೆಟ್ ನಲ್ಲಿ ತೆರೆಕಂಡಿರುವ ಆಚಾರ್ಯ ಚಿತ್ರದಲ್ಲಿ ಚಿರಂಜೀವಿ ಪ್ರಮುಖ ಪಾತ್ರಧಾರಿಯಾಗಿದ್ದಾರೆ. ರಾಮ್ ಚರಣ್ 40 ನಿಮಿಷಗಳ ಕಾಲ ತೆರೆ ಮೇಲೆ ರಂಜಿಸಲಿದ್ದಾರೆ. ಚರಣ್‌ಗೆ ಪ್ಯಾನ್ ಇಂಡಿಯಾ ವೈಡ್‌ನಲ್ಲಿ ಕ್ರೇಜ್ ಇದೆ ಆದರೆ ಚಿತ್ರತಂಡ ತೆಲುಗಿನಲ್ಲಿ ಮಾತ್ರ ಚಿತ್ರವನ್ನು ಬಿಡುಗಡೆ ಮಾಡಿದೆ.

ತನ್ನ ಮುದ್ದಾದ ನಟನೆಯಿಂದ ಪೂಜಾ ಹೆಗ್ಡೆ ಜನರ ಮನಸ್ಸನ್ನು ಆಕರ್ಷಿಸಿದ್ದಾರೆ. ಮೆಗಾಸ್ಟಾರ್ ಮತ್ತು ಮೆಗಾ ಪವರ್ ಸ್ಟಾರ್ ಇಬ್ಬರೊಂದಿಗೆ ಸ್ಕ್ರೀನ್ ಶೇರಿಂಗ್ ಜಾಕ್ ಪಾಟ್ ಹೊಡೆಯುವುದರ ಜೊತೆಗೆ ಸೆಂಟರ್‌ ಆಫ್‌ ಅಟ್ರಾಕ್ಷನ್‌ ಎನಿಸಿಕೊಂಡಿದ್ದಾರೆ.

ಅಪ್ಪ-ಮಗನ ಕಾಂಬಿನೇಷನ್‌ನಲ್ಲಿ ಬಂದ ಮೊದಲ ಸಿನಿಮಾ ಆದ್ದರಿಂದ ಮೆಗಾ ಅಭಿಮಾನಿಗಳಿಗೆ ಹಬ್ಬದೂಟವಾಗಿದೆ. ಥಿಯೇಟರ್ಸ್‌ನಲ್ಲಿ ಅಭಿಮಾನಿಗಳಲ್ಲಿ ಅಬ್ಬರ ಜೋರಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!