ರಷ್ಯಾ ಸೇನೆ ತಡೆಯಲು ಪ್ರವಾಹ ಸೃಷ್ಟಿ ಮಾಡಿದ ಉಕ್ರೇನ್‌ ನಾಗರೀಕರು..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಷ್ಯಾದಿಂದ ತಮ್ಮ ದೇಶವನ್ನು ಕಾಪಾಡಲು ಉಕ್ರೇನ್‌ ಜನತೆ ಖುದ್ದು ಬೀದಿಗಿಳಿದಿದ್ದಾರೆ. ನಮಗೆ ನಷ್ಟ ಆದರೂ ಚಿಂತೆಯಿಲ್ಲ ಆದರೆ, ರಷ್ಯಾ ಸೇನೆ ನಮ್ಮ ಪ್ರದೇಶಕ್ಕೆ ಬರಬಾರದೆಂದು ವಿಶ್ವ ಪ್ರಯತ್ನ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೀವ್‌ನ ಉತ್ತರಕ್ಕೆ ಡಿಮಿಡಿವ್ ಎಂಬ ಗ್ರಾಮವಿದೆ. ಇಲ್ಲಿ ರಷ್ಯಾದ ಯುದ್ಧ ಟ್ಯಾಂಕರ್‌ಗಳು ತಮ್ಮ ಗ್ರಾಮಕ್ಕೆ ಬರದಂತೆ ತಡೆಯಲು ಪ್ರವಾಹವನ್ನು ಸೃಷ್ಟಿ ಮಾಡಿದ್ದಾರೆ.

ಗ್ರಾಮದ ಸಮೀಪದ ದಿ.ವಿಪ್ರೋ ನದಿಯಿಂದ ಮೋಟಾರ್‌ಗಳ ಸಹಾಯದಿಂದ ಹೊಲ, ಗದ್ದೆಗಳಿಗೆ ನೀರು ಹಾಯಿಸಿದ್ದಾರೆ. ಇದರಿಂದ ರಸ್ತೆ, ಹೊಲ, ಮನೆ ಎಲ್ಲವೂ ಜಲಾವೃತಗೊಂಡಿವೆ. ನಮಗೆ ನೋವಾದರೂ ಚಿಂತೆಯಿಲ್ಲ ರಷ್ಯಾದ ಪಡೆಯನ್ನು ಹಿಮ್ಮೆಟ್ಟಿಸುವುದು ನಮ್ಮ ಗುರಿ ಎಂದು ಸ್ಥಳೀಯರು ಹೇಳಿದ್ದಾರೆ.

ರಷ್ಯಾದ ಬೆಂಗಾವಲು ಪಡೆಗಳನ್ನು ನಿಯಂತ್ರಿಸಲು ಸೇತುವೆಗಳನ್ನು ನಾಶಪಡಿಸಿದ್ದಾರೆ. ಇದುವರೆಗೂ ದೇಶದ 300ಕ್ಕೂ ಹೆಚ್ಚು ಸೇತುವೆಗಳನ್ನು ಅಲ್ಲಿನ ಜನ ಧ್ವಂಸ ಮಾಡಿದ್ದಾರೆ ಎನ್ನಲಾಗಿದೆ. ಗ್ರಾಮದ ಪ್ರವಾಹ ಸೃಷ್ಟಿ ಪೋಟೋಗಳನ್ನು ಉಕ್ರೇನ್ ಸರ್ಕಾರದ ಅಧಿಕಾರಿಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದ ಜಗತ್ತು ಉಕ್ರೇನಿಯನ್ನರ ಹೋರಾಟದ ಶೈಲಿಗೆ ಬೆರಗಾಗಿದ್ದಾರೆ.

 

 

 

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!