ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀಲಂಕಾ ಬ್ಯಾಟರ್ ಧನುಷ್ಕಾ ಗುಣತಿಲಕ ವಿರುದ್ಧದ ನಿಷೇಧ ಶಿಕ್ಷೆಯನ್ನು ವಾಪಸ್ ಪಡೆಯಲು ಕ್ರಿಕೆಟ್ ಮಂಡಳಿ ನಿರ್ಧರಿಸಿದೆ.
ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ಗಂಭೀರ ಲೈಂಗಿಕ ದೌರ್ಜನ್ಯದ (Physical abuse) ಆರೋಪಗಳ ಮೇಲೆ ಕ್ರಿಕೆಟಿಗನ ಮೇಲೆ ದೂರು ದಾಖಲಾಗಿತ್ತು.ಹಲವಾರು ನಿಷೇಧಗಳನ್ನು ಹೇರಲಾಗಿತ್ತು. ಇದೀಗ ಅವರ ಮೇಲಿನ ಶಿಕ್ಷೆಯನ್ನು ವಾಪಸ್ ಪಡೆಯುವುದಾಗಿ ಸಮಿತಿ ಹೇಳಿದೆ.
ಶಿಕ್ಷೆಯನ್ನು ವಾಪಸ್ ಪಡೆಯುವ ಶಿಫಾರಸುಗಳನ್ನು ಅಕ್ಟೋಬರ್ 13 ರಂದು ಮಂಡಳಿಯ ಕಾರ್ಯಕಾರಿ ಸಮಿತಿ ಅನುಮೋದಿಸಿದೆ. ಆಲ್ರೌಂಡರ್ಗೆ ಲಿಖಿತ ಎಚ್ಚರಿಕೆಯನ್ನು ನೀಡಲಾಗಿದೆ. ಹೀಗೆ ಭವಿಷ್ಯದ ಕ್ರಿಕೆಟ್ ಚಟುವಟಿಕೆಗಳಲ್ಲಿ ಅವರು ರಾಷ್ಟ್ರದ ಪ್ರತಿನಿಧಿಯಾಗಿ ಅದೇಶ ಸ್ಥಾನಮಾನವನ್ನು ಯಾವಾಗಲೂ ಕಾಪಾಡಬೇಕು ಎಂದು ಅವರಿಗೆ ಸೂಚಿಸಲಾಗಿದೆ.
ಗುಣತಿಲಕ ಅವರನ್ನು 2022 ರಲ್ಲಿ ಆಸ್ಟ್ರೇಲಿಯಾದಲ್ಲಿ ಟಿ 20 ಐ ವಿಶ್ವಕಪ್ ಸಮಯದಲ್ಲಿ ಬಂಧಿಸಲಾಗಿತ್ತು. ಬಂಧನದ ನಂತರ, ಅವರನ್ನು ದೇಶದಲ್ಲಿ 11 ತಿಂಗಳ ಕಾಲ ಪ್ರಯಾಣ ನಿರ್ಬಂಧಗಳಿಗೆ ಒಳಪಡಿಸಲಾಗಿತ್ತು. ವಿಚಾರಣೆಯನ್ನು ಎದುರಿಸಿದ್ದರು. ಅದು ನಂತರ ಅವರನ್ನು ಆರೋಪದಿಂದ ಮುಕ್ತಗೊಳಿಸಲಾಗಿತ್ತು. ಇದೀಗ ಅವರ ನಿಷೇಧವನ್ನು ತೆಗೆದುಹಾಕುವುದರೊಂದಿಗೆ, ಆಲ್ರೌಂಡರ್ ಅಂತಿಮವಾಗಿ ದೀರ್ಘ ವಿರಾಮದ ಬಳಿಕ ಅಂತಾರಾಷ್ಟ್ರೀಯ ಕರ್ತವ್ಯಗಳಿಗೆ ಮರಳುವಂತಾಗಿದೆ.