Monday, August 8, 2022

Latest Posts

ನಟ ಅರ್ಜುನ್‌ ಸರ್ಜಾ ತಾಯಿ ವಿಧಿವಶ: ವಿಷಾದದಲ್ಲಿ ಸರ್ಜಾ ಕುಟುಂಬ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸರ್ಜಾ ಕುಟುಂಬಕ್ಕೆ ಮತ್ತೊಂದು ಆಘಾತ ಎದುರಾಗಿದೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟ ಅರ್ಜುನ್‌ ಸರ್ಜಾ ಅವರ ತಾಯಿ, ಧೃವ ಸರ್ಜಾ ಅವರ ಅಜ್ಜಿ ಲಕ್ಷ್ಮೀದೇವಿ ಇಂದು ನಿಧನರಾಗಿದ್ದಾರೆ. 84 ವರ್ಷದವರಾದ ಅವರು ಅನಾರೋಗ್ಯದಿಂದ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಇಹಲೋಕ ತ್ಯಜಿಸಿದ್ದಾರೆ.

ಅರ್ಜುನ್ ತಾಯಿಯ ಸಾವಿನ ಸುದ್ದಿಯಿಂದ ಸರ್ಜಾ ಕುಟುಂಬದಲ್ಲಿ ಶೋಕ ಆವರಿಸಿದೆ. ವಿಷಯ ತಿಳಿದ ಅನೇಕ ಸೆಲೆಬ್ರಿಟಿಗಳು ಆಕೆಗೆ ಶ್ರದ್ಧಾಂಜಲಿ ಸಲ್ಲಿಸಿ, ಅರ್ಜುನ್‌ ಸರ್ಜಾಗೆ ಧೈರ್ಯ ತುಂಬುತ್ತಿದ್ದಾರೆ. ಅರ್ಜುನ್‌ ಸರ್ಜಾ ಸದ್ಯ ಬೆಂಗಳೂರಿನಲ್ಲೇ ಇದ್ದು, ಧೃವ ಸರ್ಜಾ ಮಾರ್ಟಿನ್‌ ಚಿತ್ರದ ಶೂಟಿಂಗ್‌ಗಾಗಿ ಹೈದರಾಬಾದ್‌ನಲ್ಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss