ಹೊಸದಿಗಂತ ವರದಿ, ಮಂಗಳೂರು;
ಲೋಕಾಯುಕ್ತ ಎಸ್‌ಐಟಿ ಕೆಲಸಕ್ಕೆ ಅಡ್ಡಿಪಡಿಸಿದರೆ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಎಡಿಜಿಪಿ ಚಂದ್ರಶೇಖರ್ ಜಟಾಪಟಿ ವಿಚಾರವಾಗಿ ಪ್ರತಿಕ್ರಿಯಿಸಿರುವ ಗೃಹ ಸಚಿವರು, ಚಂದ್ರಶೇಖರ್ ನೇತೃತ್ವದಲ್ಲಿ ಎಸ್ ಐಟಿಯನ್ನು ಕಾನೂನು ಪ್ರಕಾರ ರಚಿಸಲಾಗಿದೆ.ಅವರು ಅವರ ಕೆಲಸ ಮಾಡುತ್ತಿದ್ದಾರೆ. ಕೆಲಸಕ್ಕೆ ಅಡ್ಡಿಪಡಿಸಿದರೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದು ಎಚ್ಚರಿಸಿದರು.
ಚಂದ್ರಶೇಖರ್ ತಮ್ಮ ಪತ್ರದಲ್ಲಿ ಬರ್ನಾರ್ಡ್ ಷಾ ಹೇಳಿಕೆ ಉಲ್ಲೇಖಿಸಿದ್ದಾರೆ. ಅದನ್ನು ಕುಮಾರಸ್ವಾಮಿ ತನಗೇ ಹೇಳಿದ್ದು ಎಂದು ಯಾಕೆ ಭಾವಿಸಬೇಕು? ಕುಮಾರಸ್ವಾಮಿ ಉದ್ದೇಶಿಸಿ ಹೇಳಿಲ್ಲ ಎಂದು ತಿಳಿಸಿದರು.