ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಸಿದ್ಧ ಜ್ಯೋತಿಷಿ ಹಾಗೂ ನಟ ಆಯುಷ್ಮಾನ್ ಖುರಾನಾ (Ayushmann Khurrana) ಅವರ ತಂದೆ ಪಿ.ಖುರಾನಾ ಅವರು ಇಂದು ನಿಧನರಾದರು.
ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಎರಡು ದಿನಗಳ ಹಿಂದೆ ಪಂಜಾಬ್‌ನ ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಎರಡು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಪಿ. ಖುರಾನಾ ಮೃತಪಟ್ಟಿದ್ದಾರೆ.
ನಿಧನದ ಸುದ್ದಿಯನ್ನು ಅಪರಶಕ್ತಿ ಖುರಾನಾ ವಕ್ತಾರ ಖಚಿತ ಪಡಿಸಿದ್ದು, ʻʻಖುರಾನಾ ಕುಟುಂಬ ದುಃಖದಲ್ಲಿದೆ. ಪಿ. ಖುರಾನಾ ಅವರ ಅಗಲಿಕೆಯ ನೋವನ್ನು ಭರಿಸುವಂತಹ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ನೀಡಲಿʼʼ ಎಂದಿದ್ದಾರೆ.
ಪಿ. ಖುರಾನಾ ಪ್ರಸಿದ್ಧ ಜ್ಯೋತಿಷಿಯಾಗಿದ್ದು, ಜ್ಯೋತಿಷ್ಯ ಶಾಸ್ತ್ರದಲ್ಲಿ ಅಪಾರ ಪಾಂಡಿತ್ಯವನ್ನು ಹೊಂದಿದ್ದರು. ಈ ಕುರಿತಾಗಿ ಅವರು ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಮಗನು ಸಿನಿಮಾ ರಂಗದಲ್ಲಿ ತೊಡಗಿಕೊಳ್ಳಲು ಇವರೇ ಕಾರಣ. ತಂದೆಯ ಆಸೆಯಂತೆಯೇ ಆಯುಷ್ಮಾನ್ ಬಾಲಿವುಡ್‌ಗೆ ಎಂಟ್ರಿ ಕೊಟ್ಟು ಹಲವಾರು ಸಿನಿಮಾಗಳನ್ನು ಮಾಡಿದ್ದಾರೆ.