July 16, 2026
Thursday, July 16, 2026
spot_img

ಹೊಸ ರಾಜಕೀಯ ಪಕ್ಷ ಕಟ್ತಾ ಇದೀನಿ, ಯಾರೆಲ್ಲ ಕೈ ಜೋಡಿಸ್ತೀರ ಎಂದ ನಟ ಚೇತನ್‌ ಅಹಿಂಸ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನನ್ನದೇ ಆದ ರಾಜಕೀಯ ಪಕ್ಷ ಕಟ್ಟಲಿದ್ದೇನೆ.ವಿವಿಧ ಸಮಾಜ ಪರ ಕೆಲಸ ಮಾಡುವ ಸಂಘಟನೆಗಳು, ದಲಿತ ಸಂಘಟನೆಗಳು, ಬಹುಜನ ಸಂಘಟನೆಗಳು ಸೇರಿದಂತೆ ಎಲ್ಲ ಸಂಘಟನೆಗಳನ್ನು ಒಗ್ಗಟ್ಟಾಗಿಸಿ ಹೊಸ ಪಕ್ಷ ಕಟ್ಟುತ್ತೇವೆ ಎಲ್ಲರೂ ಕೈಜೋಡಿಸಿ ಎಂದು ನಟ ಚೇತನ್‌ ಅಹಿಂಸಾ ಹೇಳಿದ್ದಾರೆ.

ನಮ್ಮ ಪಕ್ಷದ ಬಗ್ಗೆ ಪ್ರತಿಯೊಬ್ಬರಿಗೂ ಗೊತ್ತಾಗಬೇಕು.ಅದಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇವೆ. 224 ಕ್ಷೇತ್ರದಲ್ಲೂ ಪಕ್ಷ ಸಂಘಟನೆ ಮಾಡುತ್ತೇವೆ. 2027ರ ಜನವರಿ ತಿಂಗಳಲ್ಲಿ ಹುಬ್ಬಳ್ಳಿಯಲ್ಲಿ ಪಕ್ಷದ ಹೆಸರು, ಪಕ್ಷದ ಚಿನ್ಹೆ ಪಕ್ಷದ ಪ್ರಣಾಳಿಕೆ,ಪಕ್ಷದ ಧ್ವಜ ರಾಜ್ಯ ಸಮಿತಿ ರಚನೆ, ಇನ್ನಿತರೆ ವಿಚಾರಗಳ ಘೋಷಣೆ ಮಾಡಲಿದ್ದೇವೆ ಎಂದು ಚೇತನ್ ಅಹಿಂಸ ಹೇಳಿದ್ದಾರೆ.

ಸಮಾಜ ಮೇಲಿನವರಿಗೊಂದು ಕೆಳಗಿನವರಿಗೊಂಡು ಇರೋದು ಬೇಡ. ಸಮ ಸಮಾಜ ನಮ್ಮದಾಗಲಿ. ಇದೇ ನಮ್ಮ ಪಕ್ಷದ ಉದ್ದೇಶ.ಪಕ್ಷದ ಹೆಸರಿನಲ್ಲಿ ಸಂವಿಧಾನದ ಪದಗಳಿರಲಿವೆ. ನಾವು ಪಕ್ಷವನ್ನು ರಿಜಿಸ್ಟರ್ ಮಾಡುವ ಪ್ರಕ್ರಿಯೆಯಲ್ಲಿದ್ದೇವೆ‌ ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !