ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಚಿತ್ರರಂಗದ ಹೆಸರಾಂತ ನಟ ಚೇತನ್‌ರನ್ನು ಶೇಷಾದ್ರಿಪುರ ಪೊಲೀಸರು ಬಂಧಿಸಿದ್ದಾರೆ.
ಸದಾ ತಮ್ಮ ನೇರವಾದ ಹೇಳಿಕೆಗಳು ಹಾಗೂ ಸಿದ್ಧಾಂತಗಳಿಂದ ಸುದ್ದಿಯಲ್ಲಿ ಇರುವ ಚೇತನ ಹಿಂದುತ್ವದ ಬಗ್ಗೆ ಕೆಟ್ಟದಾಗಿ ಟ್ವೀಟ್ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಈ ಹಿಂದೆಯೇ ದೂರು ದಾಖಲಾಗಿದ್ದು, ಚೇತನ್‌ರನ್ನು ಅರೆಸ್ಟ್ ಮಾಡಲಾಗಿದೆ.
ಹಿಂದುತ್ವವನ್ನು ಸುಳ್ಳಿನ ಆಧಾರದ ಮೇಲೆ ಕಟ್ಟಲಾಗಿದೆ. ಸಾವರ್ಕರ್ ಹೇಳುತ್ತಾರೆ ರಾಮನು ರಾವಣನನ್ನು ಸೋಲಿಸಿ ಅಯೋಧ್ಯೆಗೆ ಹಿಂದಿರುಗಿದಾಗಿನಿಂದ ಭಾರತೀಯ ರಾಷ್ಟ್ರ ಆರಂಭವಾಯಿತು ಎಂದು, ಆದರೆ ಇದು ಸುಳ್ಳು. 1992 ರಲ್ಲಿ ಬಾಬರಿ ಮಸೀದಿ ರಾಮನ ಜನ್ಮಭೂಮಿ ಎನ್ನುತ್ತಾರೆ ಇದು ಸುಳ್ಳು. ಇದೀಗ ಉರಿಗೌಡ ಮತ್ತು ನಂಜೇಗೌಡರು ಟಿಪ್ಪುವನ್ನು ಕೊಂದಿದ್ದರು ಎನ್ನುತ್ತಿದ್ದಾರೆ ಇದೂ ಕೂಡ ಸುಳ್ಳು. ಹಿಂದುತ್ವವನ್ನು ಸತ್ಯದಿಂದ ಸೋಲಿಸಬಹುದು. ಸತ್ಯವೇ ಸಮಾನತೆ ಎಂದು ಚೇತನ್ ಟ್ವೀಟ್ ಮಾಡಿದ್ದಾರೆ.