Friday, June 2, 2023

Latest Posts

92ರ ಹರೆಯದಲ್ಲಿ ಐದನೇ ಮದುವೆಗೆ ಸಿದ್ಧವಾದ ಬಿಲಿಯನೇರ್..‌ವಧುವಿನ ವಯಸ್ಸೆಷ್ಟು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿಶ್ವ ಮಾಧ್ಯಮ ದಿಗ್ಗಜ, ಆಸ್ಟ್ರೇಲಿಯನ್-ಅಮೆರಿಕನ್ ಉದ್ಯಮಿ, ಬಿಲಿಯನೇರ್ ರೂಪರ್ಟ್ ಮುರ್ಡೋಕ್ 92 ನೇ ವಯಸ್ಸಿನಲ್ಲಿ ಐದನೇ ಬಾರಿಗೆ ಮದುವೆಯಾಗಲು ಸಿದ್ಧರಾಗಿದ್ದಾರೆ. ಈಗಾಗಲೇ ನಾಲ್ಕು ಜನರಿಗೆ ವಿಚ್ಛೇದನ ನೀಡಿರುವ ಬಿಲಿಯನೇರ್ ಇತ್ತೀಚೆಗೆ ತನ್ನ ಸ್ವಂತ ಪತ್ರಿಕೆಯಾದ ನ್ಯೂಯಾರ್ಕ್ ಪೋಸ್ಟ್‌ಗೆ ಕೊಟ್ಟ ಸಂದರ್ಶನದಲ್ಲಿ ತನ್ನ ಗೆಳತಿ ಆನ್ ಲೆಸ್ಲಿ ಸ್ಮಿತ್ ಎಂಬ 66 ವರ್ಷದ ಮಹಿಳೆಯನ್ನು ಮದುವೆಯಾಗುವುದಾಗಿ ತಿಳಿಸಿದ್ದಾರೆ.

ರೂಪರ್ಟ್ ಮುರ್ಡೋಕ್ ಮತ್ತು ಅನ್ಲೆಸ್ಲಿ ಸ್ಮಿತ್ ಈ ತಿಂಗಳ 17 ರಂದು ನ್ಯೂಯಾರ್ಕ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ನಿಶ್ಚಿತಾರ್ಥದ ಸಮಯದಲ್ಲಿ, ಮುರ್ಡೋಕ್ ಇದು ತನ್ನ ಕೊನೆಯ ಮದುವೆಯಾಗಿದೆ ಮತ್ತು ನಾನು ತುಂಬಾ ಸಂತೋಷವಾಗಿದ್ದೇನೆ ಎಂದು ಹೇಳಿದ್ದಾನೆ. ಸದ್ಯದಲ್ಲೇ ಇವರ ಮದುವೆ ನಡೆಯಲಿದ್ದು, ಅಮೆರಿಕಾ ಹಾಗೂ ಬ್ರಿಟನ್ ನಲ್ಲಿ ಕಾಲ ಕಳೆಯಲು ನಿರ್ಧರಿಸಿದ್ದಾರಂತೆ.

ಮುರ್ಡೋಕ್ ಮೊದಲು ಮದುವೆಯಾಗಿದ್ದು ಪೆಟ್ರೀಷಿಯಾ ಬುಕರ್ ಎಂಬ ಮಹಿಳೆಯನ್ನು. ಅವರು 1960 ರ ದಶಕದ ಉತ್ತರಾರ್ಧದಲ್ಲಿ ಆಕೆಗೆ ವಿಚ್ಛೇದನ ನೀಡಿದರು ಮತ್ತು ನಂತರ ಅನ್ನಾ ಮರಿಯಾ ಮನ್ ಅವರನ್ನು ಮದುವೆಯಾದರು. ಆಕೆ ಪತ್ರಿಕೆಯ ವರದಿಗಾರ್ತಿ. ಅವರು 30 ವರ್ಷಗಳಿಗಿಂತ ಹೆಚ್ಚು ಕಾಲ ಒಟ್ಟಿಗೆ ವಾಸಿಸಿದ್ದು, 1999 ರಲ್ಲಿ ವಿಚ್ಛೇದನ ಪಡೆದರು. ನಂತರ ಅವರು ಮೂರನೇ ಬಾರಿಗೆ ವೆಂಡಿ ಡೆಂಗ್ ಅವರನ್ನು ವಿವಾಹವಾದರು. ಆದರೆ ಅವರ ಸಂಬಂಧ ಹೆಚ್ಚು ಕಾಲ ಉಳಿಯದೆ 2013ರಲ್ಲಿ ವಿಚ್ಛೇದನ ಪಡೆದರು. 2016 ರಲ್ಲಿ ಜೆರ್ರಿ ಹಾಲ್ ನಾಲ್ಕನೇ ಬಾರಿಗೆ (65) ಮದುವೆಯಾಗಿದ್ದ ಮುರ್ಡೋಕ್ ಕಳೆದ ವರ್ಷ ಆಗಸ್ಟ್‌ನಲ್ಲಿ ವಿಚ್ಛೇದನ ನೀಡಿದ್ದರು. ಈಗ 92 ನೇ ವಯಸ್ಸಿನಲ್ಲಿ, ಮುರ್ಡೋಕ್ ತನ್ನ ಗೆಳತಿ ಆನ್ ಲೆಸ್ಲಿ ಸ್ಮಿತ್ ಅವರನ್ನು ಐದನೇ ಬಾರಿಗೆ ಮದುವೆಯಾಗಲು ಸಿದ್ಧರಾಗಿದ್ದಾರೆ.

ಮುರ್ಡೋಕ್ ಪ್ರಸ್ತುತ ವಿವಾಹವಾಗಿರುವ ಆನ್ನೆಸ್ಲಿ ಸ್ಮಿತ್ ಅವರ ಪತಿ ಕೂಡ ಪ್ರಮುಖ ವ್ಯಕ್ತಿ. 2009 ರಲ್ಲಿ ನಿಧನರಾದ ಬಳಿಕ ಇವರಿಬ್ಬರ ನಡುವೆ ಪ್ರೀತಿ ಚಿಗುರಿತ್ತು. ಅಂತಿಮವಾಗಿ, 66 ವರ್ಷದ ಆನ್ನೆಸ್ಲಿ ಸ್ಮಿತ್ 94 ವರ್ಷದ ಮುರ್ಡೋಕ್ ಅವರನ್ನು ಮದುವೆಯಾಗಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!