ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೈಲಿಗೆ ಕಾಲಿಟ್ಟ ಐದು ದಿನಗಳ ಬಳಿಕ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ, ನಟ ದರ್ಶನ್‌ಗೆ ಟಿವಿ ನೋಡುವ ಭಾಗ್ಯ ಲಭಿಸಿದೆ. ಸತತ ಬೇಡಿಕೆಗಳ ಬಳಿಕ ದರ್ಶನ್ ಮನವಿಯನ್ನು ಪುರಸ್ಕರಿಸಿರುವ ಜೈಲಧಿಕಾರಿಗಳು ಸೆಲ್‌ಗೆ ಟಿವಿ ಅಳವಡಿಸಿದ್ದಾರೆ.
ಜೈಲು ನಿಯಮದ ಪ್ರಕಾರ ವಿಚಾರಣಾಧೀನ ಕೈದಿಗೆ ಟಿವಿ ಸೌಲಭ್ಯ ನೀಡಬಹುದು. ಹೀಗಾಗಿ ಈ ಹಿಂದೆಯೇ ದರ್ಶನ್ ಟಿವಿಗೆ ಬೇಡಿಕೆ ಇಟ್ಟಿದ್ದರು. ಆದರೆ ಟಿವಿ ಕೆಟ್ಟುಹೋಗಿದ್ದ ಕಾರಣ ಇದು ಸಾಧ್ಯವಾಗಿರಲಿಲ್ಲ. ಇದೀಗ ಹೊರ ಜಗತ್ತಿನ ಬೆಳವಣಿಗೆಗಳನ್ನು ಕಾಣಲು ಅಧಿಕಾರಿಗಳು ಅನುವುಮಾಡಿಕೊಟ್ಟಿದ್ದಾರೆ.