ಅತ್ತ ಜೈಲಿನಲ್ಲಿ ನಟ ದರ್ಶನ್‌: ಇತ್ತ ಸಖತ್ ಟ್ರೆಂಡಿಂಗ್ ಆಗುತ್ತಿದೆ ಖೈದಿ 6106 ನಂಬರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅರೆಸ್ಟ್ ಆಗಿದ್ದಾರೆ. ಜೈಲಿನಲ್ಲಿ ನಟ ದರ್ಶನ್‌ ಗೆ ಖೈದಿ ನಂಬರ್‌ 6106 ನೀಡಲಾಗಿದೆ.

ಇತ್ತ 6106 ಸ್ಟಿಕ್ಕರ್‌ಗೆ ಫುಲ್ ಡಿಮ್ಯಾಂಡ್ ಕ್ರಿಯೇಟ್ ಆಗಿದ್ದು, ಮೊಬೈಲ್ ಅಂಗಡಿಗಳ ಮುಂದೆ ಜನರು ಕ್ಯೂ ನಿಂತಿದ್ದಾರೆ. ತಮ್ಮ ಮೊಬೈಲ್ ಕವರ್ ಮಾಡ್ಕೊಂಡ ಫ್ಯಾನ್ಸ್, ಈ ಮೂಲಕ ತಮ್ಮ ಮೆಚ್ಚಿನ ‘ಡಿ ಬಾಸ್‌;ಗೆ ತಮ್ಮ ಅಭಿಮಾನವನ್ನು ತೋರಿಸುತ್ತಿದ್ದಾರೆ.

ಖೈದಿ ನಂಬರ್ 6106 ಈಗ ಬೈಕ್,ಆಟೋ ಹಾಗೂ ಕಾರುಗಳ ಹಿಂದೆ ಹಾಗು ಮುಂದೆಯೂ ಕಂಡುಬರುತ್ತಿದ್ದು ಭಾರೀ ಟ್ರೆಂಡಿಂಗ್ ಸೃಷ್ಟಿಯಾಗಿದೆ. ಖೈದಿ ನಂಬರ್ 6106 ಸೋಶಿಯಲ್ ಮೀಡಿಯಾಗಳಲ್ಲಿ ಮತ್ತೆ ಭಾರೀ ಟ್ರೆಂಡಿಂಗ್ ಆಗಿದೆ. ಬಹಳಷ್ಟು ಬೈಕ್,ಆಟೋಗಳ ಹಿಂದೆ ಕೂಡ ಇದೇ ಖೈದಿ ನಂಬರ್ ಸ್ಟಿಕ್ಕರ್ ಕಾಣಸಿಗುತ್ತಿದ್ದು, ಕೈಗೆ ಬೇಡಿ ಹಾಕಿಸಿರುವ ಸ್ಟಿಕ್ಕರ್ ಜೊತೆಗೆ ಖೈದಿ ಹಾಕಿಸಿ ಟ್ರೆಂಡಿಂಗ್ ಮಾಡಲಾಗುತ್ತಿದೆ.

ಇದೇ ವೇಳೆ ಪರಪ್ಪನ ಅಗ್ರಹಾರದ ಜೈಲಿನಿಂದಲೇ ನಟ ದರ್ಶನ್ ಅವರು ತಮ್ಮ ಅಭಿಮಾನಿಗಳಿಗೆ ಜೈಲು ಅಧಿಕಾರಿಗಳ ಮೂಲಕ ಮನವಿ ಮಾಡಿಕೊಂಡಿರುವ ಸಂದೇಶ ಎಲ್ಲಾ ಕಡೆ ಸಖತ್ ವೈರಲ್ ಆಗುತ್ತಿವೆ.

ಸ್ಯಾಂಡಲ್‌ವುಡ್ ನಟ ದರ್ಶನ್ ಇದೀಗ ಜೈಲಿನಿಂದಲೇ ತಮ್ಮ ಅಸಂಖ್ಯಾತ ಅಭಿಮಾನಿಗಳಿಗೆ ಪತ್ರ ಬರೆದಿದ್ದಾರೆ. ಅಭಿಮಾನಿಗಳಿಗೆ ನಟ ದರ್ಶನ್ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಜೈಲಿನಿಂದಲೇ ನಟ ದರ್ಶನ್, ಜೈಲಾಧಿಕಾರಿಗಳ ಮೂಲಕ ಅಭಿಮಾನಿಗಳಿಗೆ ಸಂದೇಶ ಕಳಿಸಿ ಮನವಿ ಮಾಡಿಕೊಂಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!