ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ದರ್ಶನ್ ಬಳ್ಳಾರಿ ಜೈಲಿಗೆ ಸ್ಟೈಲಿಶ್ ಲುಕ್‌ನಲ್ಲಿ ಎಂಟ್ರಿ ನೀಡಿದ ವಿಚಾರವಾಗಿ ನಿಯಮ ಉಲ್ಲಂಘಿಸಿದ ಬೆಂಗಾವಲು ಪಡೆಗೆ ನೊಟೀಸ್ ನೀಡಲಾಗುವುದು ಎಂದು ಬಂಧಿಕಾನೆ ಡಿಐಜಿ ಟಿ.ಪಿ ಶೇಷಾ ತಿಳಿಸಿದ್ದಾರೆ.
ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಿದ್ದು , ಇತ್ತ ಕಾರಾಗೃಹದ ಒಳಗೆ ಎಂಟ್ರಿ ನೀಡುವಾಗ ಸ್ಟೈಲಿಶ್ ಲುಕ್ನಲ್ಲಿ ಕಾಣಿಸಿಕೊಂಡರು. ಆದರೆ ಯಾವುದೇ ಕಾರಣಕ್ಕೂ ಜೈಲಿನಲ್ಲಿ ಕೂಲಿಂಗ್ ಗ್ಲಾಸ್‌ನಂಥ ವಸ್ತುಗಳನ್ನು ಒಯ್ಯುವ ಹಾಗಿಲ್ಲ. ಈ ಹಿನ್ನೆಲೆಯಲ್ಲಿ ನಿಯಮ ಉಲ್ಲಂಘಿಸಿದ ಬೆಂಗಾವಲು ಪಡೆಗೆ ನೊಟೀಸ್ ನೀಡಲಾಗುವುದು ಎಂದು ಬಂಧಿಕಾನೆ ಡಿಐಜಿ ಟಿ.ಪಿ ಶೇಷಾ ತಿಳಿಸಿದ್ದಾರೆ.