ಹೊಸದಿಗಂತ ಡಿಜಿಟಲ್ ಡೆಸ್ಕ್:
5 ತಿಂಗಳ ಬಳಿಕ ತಿಹಾರ್ ಜೈಲಿನಿಂದ ಬಿಡುಗಡೆಯಾದ ಬಿಆರ್ಎಸ್ ನಾಯಕಿ ಕೆ.ಕವಿತಾ ಅವರು ತಮ್ಮ ತಂದೆ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರನ್ನು ಇಂದು ಭೇಟಿಯಾದರು.
ತಿಹಾರ್ ಜೈಲಿನಿಂದ ಬಿಡುಗಡೆಯಾದ ಎರಡು ದಿನಗಳ ಬಳಿಕ ಎರವಳ್ಳಿಯಲ್ಲಿರುವ ಕೆಸಿಆರ್ ನಿವಾಸಕ್ಕೆ ಪತಿ, ಮಗನ ಸಮೇತ ತೆರಳಿದ ಕೆ.ಕವಿತಾ, ತಂದೆಯ ಆರ್ಶೀವಾದ ಪಡೆದಿದ್ದಾರೆ. ತಮ್ಮ ತಂದೆಯ ನಿವಾಸದಲ್ಲಿ ಕವಿತಾ ಅವರಿಗೆ ಅದ್ಧೂರಿ ಸ್ವಾಗತ ದೊರೆತಿದೆ.
5 ತಿಂಗಳ ನಂತರ ಮಾಜಿ ಸಿಎಂ ಕೆಸಿಆರ್ ತಮ್ಮ ಮಗಳನ್ನು ಭೇಟಿ ಮಾಡಿದ್ದಾರೆ. ಮಗಳನ್ನು ಕಂಡ ಅವರು ಪ್ರೀತಿಯಿಂದ ಅಪ್ಪುಗೆ ನೀಡಿ ಭಾವುಕರಾಗಿದ್ದಾರೆ .
ತಂದೆಯನ್ನು ಭೇಟಿಯಾಗಿರುವ ಕುರಿತು ಕವಿತಾ ಸಾಮಾಜಿಕ ಜಾಲತಾಣವಾದ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು, ಸತ್ಯಮೇವ ಜಯತೆ ಎಂದು ಬರೆದುಕೊಂಡಿದ್ದಾರೆ.
ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಮಾರ್ಚ್‌ನಿಂದ ಜೈಲಿನಲ್ಲಿದ್ದ ಕೆ. ಕವಿತಾ ಆ.27ರ ಸಂಜೆ ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ತೆಲಂಗಾಣದ ರಾಜಕಾರಣಿ ಕವಿತಾ ಅವರಿಗೆ ಆ. 27ರಂದು ಬೆಳಗ್ಗೆ ಸುಪ್ರೀಂ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು. ಆ ದಿನದ ಸಂಜೆ ಅವರು ತಿಹಾರ್ ಜೈಲಿನಿಂದ ಬಿಡುಗಡೆಯಾಗಿದ್ದರು.