ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಕೇಸ್ನಲ್ಲಿ ಜಾಮೀನು ಪಡೆದು ಚಿಕಿತ್ಸೆ ಪಡೆಯುತ್ತಿರುವ ನಟ ದರ್ಶನ್ಗೆ ಮತ್ತೊಂದು ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಪೊಲೀಸರು 2ನೇ ಚಾರ್ಜ್ಶೀಟ್ನಲ್ಲಿ ದರ್ಶನ್ ವಿರುದ್ಧ ಪ್ರಬಲ ಸಾಕ್ಷ್ಯವನ್ನು ಸೇರಿಸಿದ್ದಾರೆ.
ಸದ್ಯ ಮಧ್ಯಂತರ ಜಾಮೀನು ಪಡೆದು ದರ್ಶನ್ ಅವರು ಆಚೆ ಬಂದಿದ್ದಾರೆ. 6 ವಾರಗಳ ಕಾಲ ಷರತ್ತು ಬದ್ಧ ಜಾಮೀನು ಸಿಕ್ಕಿ ಸದ್ಯ ಚಿಕಿತ್ಸೆ ಪಡೀತಿದ್ದಾರೆ. ಜಾಮೀನಿನ ಅವಧಿ ಕೂಡ ಅರ್ಧದಷ್ಟು ಮುಗಿಯುತ್ತಾ ಬಂದಿದೆ.
ಇತ್ತ ಪೊಲೀಸರು ಸುಪ್ರೀಂಕೋರ್ಟ್ಗೆ ಮೇಲ್ಮನವಿ ಅರ್ಜಿಯನ್ನ ಸಲ್ಲಿಸಲು ಮುಂದಾಗಿದ್ದಾರೆ. ಮೇಲ್ಮನವಿಯ ಆತಂಕದ ನಡುವೆ ದರ್ಶನ್ಗೆ ಎರಡನೇ ಚಾರ್ಜ್ಶೀಟ್ ಸಂಕಟ ಎದುರಾಗಿದೆ.
ಈಗಾಗಲೇ ಪೊಲೀಸರು ಮೊದಲ ಚಾರ್ಜ್ಶೀಟ್ ಸಲ್ಲಿಸಿ ಪ್ರಮುಖ ಸಾಕ್ಷಿಗಳನ್ನ ನ್ಯಾಯಲಯಕ್ಕೆ ಒಪ್ಪಿಸಿದ್ರು. ಈಗ ಎರಡನೇ ಚಾರ್ಜ್ಶೀಟ್ ಸಿದ್ಧ ಮಾಡಿದ್ದು, ಶುಕ್ರವಾರ ಸಂಜೆಯೊಳಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ತಯಾರಿ ನಡೆಸಿದ್ದಾರೆ. ಈ ಚಾರ್ಜ್ಶೀಟ್ನಲ್ಲಿ ದರ್ಶನ್ಗೆ ಮತ್ತೊಂದು ಶಾಕ್ ಇರೋದು ತಿಳಿದು ಬಂದಿದ್ದು, ಮತ್ತಷ್ಟು ಪ್ರಬಲ ಸಾಕ್ಷಿಗಳಿರುವ ಸಾಧ್ಯತೆಯಿದೆ ಎನ್ನಲಾಗಿದೆ.
ಈ ಎರಡನೇ ಚಾರ್ಜ್ಶೀಟ್ನಲ್ಲಿ ಸಾವಿರಕ್ಕೂ ಅಧಿಕ ಪುಟಗಳ ವರದಿಯಿದೆ ಎನ್ನಲಾಗಿದೆ. ಈ ಒಂದು ಸಾವಿರ ಪುಟಗಳಲ್ಲಿ ರೇಣುಕಾಸ್ವಾಮಿ ಕೊಲೆ ಕೇಸ್ ಸಂಬಂಧಿಸಿದ 20 ಕ್ಕೂ ಹೆಚ್ಚು ಸಾಕ್ಷಿಗಳು ಮತ್ತು ಎಫ್ಎಸ್ಎಲ್ ವರದಿಗಳಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
ಪೊಲೀಸರು ನ್ಯಾಯಲಯಕ್ಕೆ ಸಲ್ಲಿಸೋದಕ್ಕೆ ಸಿದ್ಧಪಡಿಸಿರುವ ಎರಡನೇ ಚಾರ್ಜ್ಶೀಟ್ನಲ್ಲಿ ಪ್ರತ್ಯಕ್ಷದರ್ಶಿ ಪುನೀತ್ ಮೊಬೈಲ್ನಿಂದ ಪಟ್ಟಣಗೆರೆ ಶೆಡ್‌ನಲ್ಲಿ ದರ್ಶನ್ ತನ್ನ ಗ್ಯಾಂಗ್ನೊಂದಿಗೆ ನಿಂತಿರೋ ಫೋಟೋ ರಿಕವರಿ ಮಾಡಿದ್ದಾರೆ. ಶೆಡ್‌ನಲ್ಲಿ ಎಲ್ಲರ ಜೊತೆ ನಿಂತಿರೋ ದರ್ಶನ್ ನಿಂತಿರುವ ಫೋಟೋ ಇದೆ ಎನ್ನಲಾಗಿದೆ.
ಈ ಫೋಟೋದಲ್ಲಿ ದರ್ಶನ್ ಬ್ಲೂ ಟೀ ಶರ್ಟ್ ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದು, ಈ ಫೋಟೋವನ್ನು ಪುನೀತ್ ಡಿಲೀಟ್ ಮಾಡಿದ್ದ. ಪೊಲೀಸರು ಈ ಫೋಟೋವನ್ನು ರಿಟ್ರೀವ್ ಮಾಡಿ ಎರಡನೇ ಚಾರ್ಜ್ಶೀಟ್ನಲ್ಲಿ ಸೇರಿಸಿದ್ದಾರೆ. ಇದರ ಜೊತೆಗೆ ಘಟನೆ ನಡೆದ ಸ್ಥಳದ ಫೋಟೋವನ್ನು ರಿಕವರಿ ಮಾಡಿದ್ದು, ಒಟ್ಟು ಎರಡು ಫೋಟೋಗಳನ್ನ ಚಾರ್ಜ್ಶೀಟ್ನಲ್ಲಿ ಸೇರಿಸಲಾಗಿದೆ.