CINE | ನಟ ದುನಿಯಾ ವಿಜಯ್‌ ಬರ್ಥ್‌ಡೇ, ಫ್ಯಾನ್ಸ್‌ ಬಳಿ ವಿಶೇಷ ಮನವಿ ಮಾಡಿದ ನಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ದುನಿಯಾ ವಿಜಯ್ ಸದ್ಯ ಸಿನಿಮಾಗಳ ಯಶಸ್ಸಿನ ಅಲೆಯಲ್ಲಿ ಇದ್ದಾರೆ. ಸಲಗ, ಭೀಮ ಸಕ್ಸಸ್ ಕಂಡ ಬೆನ್ನಲ್ಲೇ ಸಾಕಷ್ಟು ಸಿನಿಮಾಗಳು ಹುಡುಕಿಕೊಂಡು ಬಂದಿವೆ.

ಇದರಲ್ಲಿ ಜಡೇಶ್ ಕುಮಾರ್ ಹಂಪಿ ನಿರ್ದೇಶನದಲ್ಲಿ ಮೂವಿ ಮಾಡಲು ಓಕೆ ಹೇಳಿದ್ದಾರೆ. ಆದರೆ ಸಿನಿಮಾ ಟೈಟಲ್ ಅಂತಿಮವಾಗಿಲ್ಲ. ಹೀಗಾಗಿ ದುನಿಯಾ ವಿಜಯ್ ಬರ್ತ್​ಡೇಯಂದು ಫಸ್ಟ್ ಲುಕ್ ಬಿಡುಗಡೆ ಮಾಡಲಾಗುತ್ತದೆ ಎಂದು ಅಭಿಮಾನಿಗಳಿಗೆ ಗುಡ್​ನ್ಯೂಸ್ ನೀಡಿದ್ದಾರೆ.

ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್ ಕೊಟ್ಟರೇ, ಇನ್ನೊಂದು ಮನಸ್ಸಿಗೆ ಹಿಡಿಸದ ಸುದ್ದಿಯನ್ನು ದುನಿಯಾ ವಿಜಯ್ ಅವರು ಕೊಟ್ಟಿದ್ದಾರೆ. ಜನವರಿ 20 ರಂದು ದುನಿಯಾ ವಿಜಯ್ ಅವರು 51ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಆದರೆ ಈ ಸುಸಂದರ್ಭವನ್ನು ಆಚರಣೆ ಮಾಡಿಕೊಳ್ಳುತ್ತಿಲ್ಲ ಎಂದು ದುನಿಯಾ ವಿಜಯ್ ಅವರು ಹೇಳಿದ್ದಾರೆ. ಇದರಿಂದ ಅವರ ಅಭಿಮಾನಿಗಳ ಮನಸಿಗೆ ಕೊಂಚ ಘಾಸಿಯಾದಂತೆ ಆಗಿದೆ ಎನ್ನಲಾಗಿದೆ.

ಪ್ರತಿ ವರ್ಷವೂ ನನ್ನ ಹುಟ್ಟು ಹಬ್ಬವನ್ನು ನಿಮ್ಮ ಮನೆಯ, ಊರಿನ ಹಬ್ಬವನ್ನಾಗಿ ಅಭಿಮಾನಿಗಳು ಆಚರಣೆ ಮಾಡಿದ್ದೀರಿ. ಈ ಬಾರಿನು ನಿಮ್ಮ ಜೊತೆ ಬರ್ತ್​ಡೇ ಸೆಲೆಬ್ರೆಷನ್ ಮಾಡಿಕೊಳ್ಳಬೇಕು ಎನ್ನುವ ಆಸೆ ಇತ್ತು. ಆದರೆ ಹೊಸ ಸಿನಿಮಾದ ಕೆಲಸದ ಜವಾಬ್ದಾರಿ ಇರುವುದರಿಂದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ.

ಪ್ರತಿ ಬಾರಿಯಂತೆ ಈ ಸಲ ನನ್ನ ತಂದೆ, ತಾಯಿ ಸಮಾಧಿ ಬಳಿ ನಾನು ಸಿಗುವುದಿಲ್ಲ. ಅಂದು ಜಡೇಶ್ ಹಂಪಿ ಅವರು ನಿರ್ದೇಶನ ಮಾಡುತ್ತಿರುವ ವಿಕೆ29 ಸಿನಿಮಾದ ಶೂಟಿಂಗ್​ನಲ್ಲಿ ಇರುತ್ತೇನೆ. ಅಂದು ನಿಮಗಾಗಿ ವಿಕೆ29 ಸಿನಿಮಾದ ಫಸ್ಟ್​ ಲುಕ್ ರಿವೀಲ್ ಮಾಡಲಾಗುತ್ತದೆ. ಅಲ್ಲದೇ ಶನಿವಾರ ಹಾಗೂ ಭಾನುವಾರ ಕೂಡ ಮನೆಯಲ್ಲಿ ಇರಲ್ಲ. ಹೀಗಾಗಿ ಯಾರು ಕೂಡ ಮನೆ ಬಳಿ ಬರಬಾರದು ಎಂದು ದುನಿಯಾ ವಿಜಯ್ ಅವರು ಮನವಿ ಮಾಡಿಕೊಂಡಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!