554 ಮಿಲಿಯನ್ ವೀಕ್ಷಣೆ ಪಡೆದ ರೀಲ್ಸ್ ಇದು, ಗಿನ್ನಿಸ್‌ ದಾಖಲೆ ಮಾಡಿದ ಕೇರಳದ ರೀಲ್‌ ಸ್ಟಾರ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಅಪ್ಲೋಡ್ ಮಾಡುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಅದಲ್ಲದೇ, ತಾವು ಶೇರ್ ಮಾಡಿದ ವಿಡಿಯೋಗೆ ಎಷ್ಟು ವೀವ್ಸ್ ಬಂದಿದೆ, ಎಷ್ಟು ಲೈಕ್ಸ್ ಬಂದಿದೆ ಎಂದು ನೋಡುತ್ತಿರುತ್ತಾರೆ. ಇದೀಗ ಕೇರಳದ ಯುವಕನೊಬ್ಬನು, ಶೇರ್ ಮಾಡಿರುವ ರೀಲ್ಸ್ ವೊಂದು 554 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಈ ಮೂಲಕ ಮುಹಮ್ಮದ್ ರಿಜ್ವಾನ್ ಹೆಸರು ವರ್ಡ್‌ ರೆಕಾರ್ಡ್ ಬುಕ್‌ನಲ್ಲಿಯೂ ಸೇರಿಕೊಂಡಿದೆ.

ಮುಹಮ್ಮದ್ ರಿಜ್ವಾನ್ ಎಂಬಾತನ @riswan_ಫ್ರೀಸ್ಟೈಲ್ ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾಗಿರುವ ಒಂದು ರೀಲ್ಸ್ ಇಡೀ ವಿಶ್ವದಲ್ಲೇ ಅತೀ ಹೆಚ್ಚು ವೀಕ್ಷಣೆ ಕಂಡಿರುವ ರೀಲ್ಸ್ ಎನ್ನುವ ಖ್ಯಾತಿಗೆ ಪಾತ್ರವಾಗಿದ್ದು, ಈ ಮೂಲಕ ವಿಶ್ವ ದಾಖಲೆ ಬರೆದಿದ್ದಾರೆ. 2023ರ ನವೆಂಬರ್‌ನಲ್ಲಿ ಮಲಪ್ಪುರಂ ಜಿಲ್ಲೆಯ ಕೇರಳಕುಂಡ್ ಜಲಪಾತದಿಂದ ಫುಟ್ಬಾಲ್ ಫ್ರೀ ಕಿಕ್ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದರು.

ಮುಹಮ್ಮದ್ ರಿಜ್ವಾನ್ 1.3 ಮಿಲಿಯನ್ ಫಾಲೋವರ್ಸ್ ಹೊಂದಿದ್ದು, ಆದರೆ ಈ ಒಂದು ರೀಲ್ಸ್ ನಿಂದಲೇ ವಿಶ್ವ ದಾಖಲೆ ಪುಟದಲ್ಲಿ ತನ್ನ ಹೆಸರು ಸೇರಿರುವುದು ಖುಷಿಗೆ ಪಾರಾವೇ ಇಲ್ಲದಂತಾಗಿದೆ. ಈ ವಿಡಿಯೋದಲ್ಲಿ ಈ ಯುವಕನು ಜಲಪಾತದ ಮುಂದೆ ನಿಂತು ಫುಟ್‌ಬಾಲ್ ಅನ್ನು ಒದೆಯುತ್ತಿದ್ದಾನೆ. ಅದು ಜಲಪಾತದ ಒಳಗೆ ಬಿದ್ದು ಬಳಿಕ ನೀರಿನಿಂದ ಹೊರಬರುವುದನ್ನು ಕಾಣಬಹುದು. ಈ ವಿಡಿಯೋ 554 ಮಿಲಿಯನ್ ವೀಕ್ಷಣೆ ಪಡೆದಿದ್ದು, ವೀವ್ಸ್ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ.

 

View this post on Instagram

 

A post shared by muhammed riswan (@riswan_freestyle)

 

- Advertisement - Ply

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!