Sunday, December 3, 2023

Latest Posts

ನಟ ಜಗ್ಗೇಶ್​ಗೆ ಅನಾರೋಗ್ಯ: ದೆಹಲಿಯಲ್ಲಿ ಚಿಕಿತ್ಸೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ನವರಸ ನಾಯಕ ಜಗ್ಗೇಶ್​ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲ ದಿನಗಳ ಹಿಂದೆ ಕೇದರನಾಥ್​ ಮತ್ತು ಬದ್ರಿನಾಥ್​ ಯಾತ್ರೆಗೆ ಜಗ್ಗೇಶ್​ ಅವರು ತೆರಳಿದ್ದರು.

ಈ ವೇಳೆ, ಅಲ್ಲಿ ಬೆಟ್ಟ ಹತ್ತಿ ಇಳಿದ ಕಾರಣ ಹಾಗೂ ಸತತ ನಡೆದಾಟದ ಕಾರಣದಿಂದಾಗಿ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರು ವೈದ್ಯರ ಸಲಹೆ ಮೇರೆಗೆ ದೆಹಲಿ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್​ಗೆ ಒಳಗಾಗಿದ್ದಾರೆ. ಇಂದು ಮಧ್ಯರಾತ್ರಿ ಅವರು ಬೆಂಗಳೂರಿಗೆ ಆಗಮಿಸಲಿದ್ದಾರೆ.

ತಾವು ಸಿಟಿ ಸ್ಕ್ಯಾನ್​ಗೆ ಒಳಗಾಗುತ್ತಿರುವ ಚಿತ್ರವನ್ನು ಎಕ್ಸ್​ನಲ್ಲಿ ಹಂಚಿಕೊಂಡಿರುವ ನಟ ಜಗ್ಗೇಶ್​, “L4L5 compression ಆಗಿ ನಡೆದಾಡಲು ಕಷ್ಟವಾಗಿ ಯಾವ ಕಾರ್ಯದಲ್ಲೂ ಭಾಗಿಯಾಗಲು ಸಾಧ್ಯವಾಗಲಿಲ್ಲ! 2ವಾರ ಫಿಸಿಯೋ ಚಿಕಿತ್ಸೆ ಹಾಗೂ ಬೆಡ್​ರೆಸ್ಟ್​ ಕಡ್ಡಾಯ ಎಂದು ವೈದ್ಯರು ಸಲಹೆ ನೀಡಿದ್ದಾರೆ. ನಿಮ್ಮ ಮಾಹಿತಿಗಾಗಿ ಧನ್ಯವಾದ ಶುಭಸಂಜೆ” ಎಂದು ಬರೆದುಕೊಂಡಿದ್ದಾರೆ.

ಕಾವೇರಿ ಹೋರಾಟಕ್ಕೆ ಗೈರು: ಇಂದು ರಾಜ್ಯದೆಲ್ಲೆಡೆ ವಿವಿಧ ಸಂಘಟನೆಗಳಿಂದ ಕಾವೇರಿ ನೀರಿಗಾಗಿ ನಡೆಯುತ್ತಿರುವ ಬಂದ್​ಗೆ ಚಿತ್ರರಂಗ ಕೂಡ ಬೆಂಬಲ ನೀಡಿದೆ.    ಆದರೆ, ಸದಾ ಇಂತಹ ವಿಚಾರಗಳಲ್ಲಿ ಅನ್ನದಾತರ ಪರವಾಗಿ ನಿಲ್ಲುವ ನಟ ಜಗ್ಗೇಶ್​ ಅವರು ಅನಾರೋಗ್ಯದ ನಿಮಿತ್ತ ಕಾವೇರಿ ಹೋರಾಟಕ್ಕೆ ಗೈರಾಗಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!