Sunday, December 10, 2023

Latest Posts

ದಿನಭವಿಷ್ಯ| ಕುಟುಂಬ ಸದಸ್ಯರ ಮನೋಭಾವ ಸರಿಯಾಗಿ ಅರ್ಥೈಸಿ ವ್ಯವಹರಿಸಿರಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮೇಷ
ನಕಾರಾತ್ಮಕ ಚಿಂತನೆ ಮನದಿಂದ ನಿವಾರಿಸಿ.  ಅಂತಹ ಮನಸ್ಥಿತಿ ಸಫಲ ಕಾರ್ಯವನ್ನೂ ವಿಫಲ ಮಾಡಬಹುದು. ಗಂಟುನೋವಿನ ಸಮಸ್ಯೆ ಕಾಣಿಸಬಹುದು.

ವೃಷಭ
ಮನೆಯಲ್ಲಿ, ವೃತ್ತಿಯಲ್ಲಿ  ಗಂಭೀರತೆ ಮುಖ್ಯ. ಎಲ್ಲವನ್ನೂ ಲಘುವಾಗಿ ಪರಿಗಣಿಸಿದರೆ ಸಮಸ್ಯೆಗೆ ಸಿಲುಕುವಿರಿ.  ಕಾರ್ಯವು ಕಷ್ಟವಾಗಬಹುದು.

ಮಿಥುನ
ಕುಟುಂಬ ಸದಸ್ಯರ ಮನೋಭಾವ ಸರಿಯಾಗಿ ಅರ್ಥೈಸಿ ವ್ಯವಹರಿಸಿರಿ. ಯಾವುದೇ ಬಿಕ್ಕಟ್ಟು ಉಂಟಾಗದಂತೆ ನೋಡಿಕೊಳ್ಳಿ.

ಕಟಕ
ಯಾವುದೋ ವಿಷಯ ಭಾವನಾತ್ಮಕ ಏರುಪೇರು ಉಂಟು ಮಾಡುವುದು. ಆತ್ಮೀಯರ ಜತೆಗೆ ಸಣ್ಣ ಕಾರಣಕ್ಕೂ ಮುನಿಸಿಕೊಳ್ಳಲು ಹೋಗಬೇಡಿ.

ಸಿಂಹ
ಅದೃಷ್ಟ ನಿಮ್ಮ ಜತೆಗಿದೆ. ಹಾಗಾಗಿ ಯಾವುದೇ ಕಾರ್ಯ ಯಶಸ್ವಿಯಾಗಿ ನೆರವೇರಲಿದೆ. ಆಪ್ತ ಬಂಧುವಿನಿಂದ ಶುಭ ಸುದ್ದಿ ಕೇಳುವಿರಿ. ಆರ್ಥಿಕ ಸ್ಥಿತಿ ಉತ್ತಮ.

ಕನ್ಯಾ
ಕೆಲಸದಲ್ಲಿ ಅಡತಡೆ ಎದುರಿಸುವಿರಿ. ಹಾಗಾಗಿ ನಿಮ್ಮ ಕೆಲಸ ಸರಾಗವಾಗಿ ನಡೆಯದು. ಆದಾಯ ಹೆಚ್ಚಾದರೂ ಅದರ ಜತೆಗೇ ಖರ್ಚೂ ಹೆಚ್ಚಲಿದೆ.

ತುಲಾ
ಈ ದಿನ ನಿಮ್ಮ ಬದುಕಿನಲ್ಲಿ ಹೊಸತನ ತರಲಿದೆ. ನಿಮ್ಮ ಬಹುದೊಡ್ಡ ಬಯಕೆ ಈಡೇರಲಿದೆ. ಆಪ್ತ ಸಂಬಂಧ ದೀರ್ಘಾವಧಿ ಬೆಳೆಯಲಿದೆ.

ವೃಶ್ಚಿಕ
ಸಂತೋಷದ ಮನಸ್ಥಿತಿ. ಹೊಸ ವ್ಯವಹಾರಕ್ಕೆ ಕೈ ಹಚ್ಚಲು ಸೂಕ್ತ ಅವಕಾಶ ದೊರಕಲಿದೆ. ವೃತ್ತಿಯಲ್ಲಿ ಹಾಗೂ ಮನೆಯಲ್ಲಿ ಕಾರ್ಯಗಳೆಲ್ಲ ಸಲೀಸಾಗಲಿವೆ.

ಧನು
ಆರೋಗ್ಯ ಸಮಸ್ಯೆ ಪರಿಹಾರಗೊಳ್ಳುವ ಸಂಕೇತ ತೋರಲಿದೆ. ಮನೆಯ ವಾತಾವರಣ ಮನಸ್ಸು ಹಿಗ್ಗಿಸುವುದು.  ಬಂಧುಗಳಿಂದ ಕೆಲಸಕ್ಕೆ ಸಹಕಾರ.

ಮಕರ
ಸವಾಲಿನ ದಿನ. ಸಾಂತ್ವನ ನೀಡುವ ವ್ಯಕ್ತಿಗಾಗಿ ಹಾತೊರೆಯುವಿರಿ. ಹಿರಿಯರ ಜತೆ ವಾಗ್ವಾದಕ್ಕೆ ಇಳಿಯಬೇಡಿ. ಕೌಟುಂಬಿಕ ಅಶಾಂತಿ.

ಕುಂಭ
ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ನಿಮ್ಮ ನಿಲುವು, ಧೋರಣೆ ಬದಲಿಸುವ ಪ್ರಸಂಗ ಬಂದೀತು. ಇಷ್ಟವಿಲ್ಲದ ಕಾರ್ಯ ಮಾಡಬೇಕಾದೀತು. ದೃಢ ಮನಸ್ಕರಾಗಿರಿ.

ಮೀನ
ಕೆಲಸದಲ್ಲಿ ಪ್ರಾಮಾಣಿಕತೆ ಇರಲಿ. ಕೌಟುಂಬಿಕ ಬಿಕ್ಕಟ್ಟು ಪರಿಹಾರಗೊಳ್ಳುವ ಸಂಕೇತ ತೋರುವುದು. ಎಲ್ಲರೊಡನೆ ಹೊಂದಾಣಿಕೆ ಮುಖ್ಯ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!