ಭಾರತ್ ಜೋಡೊ ಯಾತ್ರೆಗೆ ಸಿಗಲಿದೆ ನಟ ಕಮಲ್ ಹಾಸನ್ ಸಾಥ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೊ ಯಾತ್ರೆ ಸದ್ಯ ರಾಜಸ್ಥಾನದಲ್ಲಿದ್ದು, ಡಿ.24 ರಂದು ದೆಹಲಿಯನ್ನು ಪ್ರವೇಶಿಸಲಿದೆ. ಈ ವೇಳೆ ತಮಿಳು ನಟ ಕಮಲ್ ಹಾಸನ್ ಅವರು ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.

ಮಕ್ಕಳ್ ನೀಡಿ ಮೈಯಂ ಪಕ್ಷದ ವಕ್ತಾರರು ಈ ಕುರಿತು ಮಾಹಿತಿ ನೀಡಿದ್ದು, ನಟ, ರಾಜಕಾರಣಿ ಆಗಿರುವ ಕಮಲ್ ಹಾಸನ್ ಅವರನ್ನು ರಾಹುಲ್ ಗಾಂಧಿ ಆಹ್ವಾನಿಸಿದ್ದಾರೆ ಎಂದು ತಿಳಿಸಿದ್ದಾರೆ.

ಭಾರತ್ ಜೋಡೋ ಯಾತ್ರೆ 24 ರಂದು ದೆಹಲಿ ಪ್ರವೇಶಿಸಲಿದ್ದು, ಬಳಿಕ ಎಂಟು ದಿನಗಳ ವಿರಾಮದ ನಂತರ ಬಿಉತ್ತರ ಪ್ರದೇಶ, ಹರಿಯಾಣಕ್ಕೆ ತೆರಳಲಿದೆ. ಮುಂದಿನ ತಿಂಗಳು ಜಮ್ಮು ಮತ್ತು ಕಾಶ್ಮೀರ ಪ್ರವೇಶಿಸುವ ಮೊದಲು ಪಂಜಾಬ್ ಪ್ರವೇಶಿಸಲಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!