ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲವು ದಿನಗಳ ಹಿಂದೆ ಚಂದ್ರಯಾನ-3 ಯಶಸ್ವಿಯಾಗಿ ಸಾಗಿದ್ದು, ಇದೀಗ ಆಸ್ಟ್ರೇಲಿಯಾದಲ್ಲಿ ರಾತ್ರಿ ಆಕಾಶದಲ್ಲಿ ಕಂಡ ಚಂದ್ರಯಾನ-3 ರ ಚಿತ್ರವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಮಿಚಿಗಲ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯ ಖಗೋಳಶಾಸ್ತ್ರದ ಉತ್ಸಾಹಿ ಡೈಲನ್ ಒ’ಡೊನೆಲ್ ಅವರು ಟ್ವಿಟರ್ ಮೂಲಕ ಚಿತ್ರ ಹಂಚಿಕೊಂಡಿದ್ದಾರೆ. ‘ನಾನು ಚಂದ್ರಯಾನ-3ರ ಉಡಾವಣೆಯ ನೇರಪ್ರಸಾರವನ್ನು ಯೂಟ್ಯೂಬ್‌ನಲ್ಲಿ ವೀಕ್ಷಣೆ ಮಾಡಿದ್ದೆ. ಅದಾದ 30 ನಿಮಿಷಗಳ ಬಳಿಕ ರಾತ್ರಿಯ ಆಕಾಶದದಲ್ಲಿ ತನ್ನ ಮನೆಯ ಮೇಲಿದ್ದ ಹಾದುಹೋದ ಚಂದ್ರಯಾನ ನೌಕೆಯ ಚಿತ್ರವನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.
ಈ ಚಿತ್ರದಲ್ಲಿ ಚಂದ್ರಯಾನಸ-3 ನೌಕೆಯು ನೀಲಿ ವರ್ಣವನ್ನು ಹೊಂದಿದ್ದು, ಮಿನುಗುವ ನಕ್ಷತ್ರಗಳ ಹಿನ್ನೆಲೆಯೊಂದಿಗೆ ನೌಕೆಯ ಉಪಸ್ಥಿತಿಯನ್ನು ತೋರಿಸಿದೆ. ಈಗಾಗಲೇ ಟ್ವಿಟರ್‌ನಲ್ಲಿ 740K ವೀಕ್ಷಣೆಗಳನ್ನು ಗಳಿಸಿದೆ.
Just watched India’s space agency launch their moon rocket on YT then fly over my house 30 mins later! Congrats @isro ! Hopefully you stick the landing 💪🏼 pic.twitter.com/ETP8xL8lqv
— Dylan O'Donnell (@erfmufn) July 14, 2023
ಜುಲೈ 14 ರಂದು ಶ್ರೀಹರಿಕೋಟಾದಿಂದ ಎಲ್‌ಎಂವಿ/ಎಂ3 ರಾಕೆಟ್‌ನಲ್ಲಿ ಉಡಾವಣೆಗೊಂಡ ಚಂದ್ರಯಾನ ನೌಕೆಯ ತನ್ನ ಪ್ರಯಾಣ ಆರಂಭವಾದ ಅರ್ಧಗಂಟೆಗಳ ಬಳಿಕ ಡೈಲನ್ ಓ’ಡೊನೆಲ್ ಅವರ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚಿತ್ರವನ್ನು ಹಂಚಿಕೊಳ್ಳುತ್ತಾ, ಡೈಲನ್ ಟ್ವೀಟ್ ಮಾಡಿದ್ದು, ‘ಭಾರತದ ಬಾಹ್ಯಾಕಾಶ ಸಂಸ್ಥೆ ಚಂದ್ರಯಾನ-3 ನೇರಪ್ರಸಾರದಲ್ಲಿ ರಾಕೆಟ್ ಉಡಾವಣೆಯನ್ನು ನೋಡಿದ್ದೆ. ಇದಾದ 30 ನಿಮಿಷದ ಬಳಿಕ ಈ ನೌಕೆ ಮನೆಯ ಮೇಲಿಂದ ಹಾದು ಹೋಗಿದೆ. ಅಭಿನಂದನೆಗಳು ಇಸ್ರೋ. ನೀವು ಯಶಸ್ವಿ ಲ್ಯಾಂಡಿಂಗ್ ಮಾಡುವ ವಿಶ್ವಾಸವಿದೆ’ ಎಂದು ಬರೆದಿದ್ದಾರೆ.