ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಕಿಚ್ಚ ಸುದೀಪ್ ಇಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಮ್ಮ ಮ್ಯಾಕ್ಸ್ ಚಿತ್ರ ಯಶಸ್ವಿಯಾಗಿ ಬಿಡುಗಡೆಯಾದ ನಂತರ ದೇವಿಯ ದರುಶನ ಪಡೆದರು.
ಬೆಳಗ್ಗೆಯೇ ಮೈಸೂರಿಗೆ ಭೇಟಿ ನೀಡಿದ ಅವರು ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು. ತಮ್ಮ ನೆಚ್ಚಿನ ನಟ ಬರುತ್ತಿದ್ದಾರೆಂಬ ಸುದ್ದಿ ತಿಳಿದ ಅಸಂಖ್ಯಾತ ಅಭಿಮಾನಿಗಳು ಬೆಟ್ಟದಲ್ಲಿ ಜಮಾಯಿಸಿದ್ದರು.
ಕಿಚ್ಚ ಸುದೀಪ್ ಅವರನ್ನು ಕಂಡ ಅಭಿಮಾನಿಗಳು ಶಿಳ್ಳೆ ಹೊಡೆದು ಸಂಭ್ರಮಿಸಿದರು. ಪೂಜೆ ಮುಗಿಸಿ ಹೊರಬಂದ ಸುದೀಪ್ ಅಭಿಮಾನಿಗಳತ್ತ ಕೈಬೀಸಿದ್ದಾರೆ. ಅಭಿಮಾನಿಗಳು ನೆಚ್ಚಿನ ನಟನನ್ನು ನೋಡಿ ಖುಷಿಪಟ್ಟಿದ್ದಾರೆ.