ಹೊಸದಿಗಂತ ಹುಬ್ಬಳ್ಳಿ:
ಗದಗ ರಸ್ತೆ ಹೊರ ವಲಯದ ರಿಂಗ್ ರಸ್ತೆಯಲ್ಲಿ ಮಂಟೂರ ರಸ್ತೆಯ ಸ್ಯಾಮ್ಯುಯೆಲ್ ಮಬ್ಬು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಬೆಂಡಿಗೇರಿ ಪೊಲೀಸರು 48ಗಂಟೆಯಲ್ಲಿ ಬಂಧಿಸಿದ್ದಾರೆ.
ಸುಲೇಮಾನ್ ಬಳ್ಳಾರಿ, ಟೈಟಾಸ್ ಬಾಬು ವೆನ್ನಮ್ಮ, ಮಹ್ಮದಷಾ ಫಿರೋಜಾಬಾದ, ಮೌಲಾಸಾಬ್ ರಮಜಾನವರ ಬಂಧಿತ ಆರೋಪಿಗಳು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಬೆಂಡಿಗೇರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಎಸ್.ಆರ್. ನಾಯಕ್ ನೇತೃತ್ವದ ತಂಡ ಆರೋಪಿಗಳ ಶೋಧ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಣಕಾಸು ಹಾಗೂ ಕುಟುಂಬ ಕಲಹದಿಂದ ಕೊಲೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದು,ತನಿಖೆ ಮುಂದುವರದಿಂದೆ. ಸದ್ಯ ಆರೋಪಿಗಳನ್ನು ನ್ಯಾಯಾಲಯದ ವಶಕ್ಕೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.