FTII ಸೊಸೈಟಿಯ ಅಧ್ಯಕ್ಷರಾಗಿ ನಟ ಆರ್. ಮಾಧವನ್ ನೇಮಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (FTII) ಸೊಸೈಟಿಯ ಅಧ್ಯಕ್ಷರಾಗಿ ಮತ್ತು ಆಡಳಿತ ಮಂಡಳಿಯ ಅಧ್ಯಕ್ಷರಾಗಿ ನಟ ಆರ್ ಮಾಧವನ್ ಅವರನ್ನು ಮಾಹಿತಿ ಮತ್ತು ಪ್ರಸಾರ ಸಚಿವಾಲಯ (MIB) ಶುಕ್ರವಾರ ನೇಮಕ ಮಾಡಿದೆ.

ಈ ನಿರ್ಧಾರವನ್ನ ಸಚಿವಾಲಯವು ನಮಗೆ ಔಪಚಾರಿಕವಾಗಿ ತಿಳಿಸಿದೆ ಎಂದು ಎಫ್ ಟಿಐಐ ರಿಜಿಸ್ಟ್ರಾರ್ ಸಯ್ಯದ್ ರಬೀಹಶ್ಮಿ ಹೇಳಿದ್ದಾರೆ.

ಎಫ್ ಟಿಐಐ ಅಧ್ಯಕ್ಷರ ನೇತೃತ್ವದ ಎಫ್ಟಿಐಐ ಸೊಸೈಟಿಯು 12 ನಾಮನಿರ್ದೇಶಿತರನ್ನು ಹೊಂದಿದ್ದು, ಅವರಲ್ಲಿ ಎಂಟು ಮಂದಿ ‘ಶ್ರೇಷ್ಠ ವ್ಯಕ್ತಿಗಳು’ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದರೆ, ನಾಲ್ವರು ಎಫ್ ಟಿಐಐ ಹಳೆಯ ವಿದ್ಯಾರ್ಥಿಗಳು.

ಮಾಜಿ ಅಧ್ಯಕ್ಷ ನಿರ್ದೇಶಕ ಶೇಖರ್ ಕಪೂರ್ ಅವರ ಅಧಿಕಾರಾವಧಿ ಮಾರ್ಚ್ 3, 2023 ರಂದು ಕೊನೆಗೊಂಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!