ದನದ ಮಾಂಸ ಸಾಗಾಟ: ಆರೋಪಿ ಬಂಧನ

ಹೊಸದಿಗಂತ ವರದಿ, ಮುಂಡಗೋಡ:

ಅಕ್ರಮವಾಗಿ ದನದ ಮಾಂಸ ಸಾಗಾಟ ಮಾಡುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ಶುಕ್ರವಾರ ಪೊಲೀಸರು ದಾಳಿ ನಡೆಸಿ ಒಬ್ಬ ಆರೋಪಿಯನ್ನು ಬಂಧಿಸಿ ಬೈಕ್ ಹಾಗೂ ೨೦ ಕೆಜಿ ಮಾಂಸವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪಟ್ಟಣದ ಕಿಲ್ಲೆ ಓಣಿಯ ಅಬ್ದುಲ್‌ ಮುನಾಫ ಖಲೀಪ್(೪೨) ಬಂಧಿತ ಆರೋಪಿತ ಮತ್ತು ಶಿಗ್ಗಾಂವ ತಾಲೂಕಿನ ಸಾಧಿಕ ಆರೋಪಿತನಾಗಿದ್ದಾನೆ. ಆರೋಪಿತನು ಬಂಕಾಪುರ ರಸ್ತೆಯ ಮಾರ್ಗವಾಗಿ ತನ್ನ ಬೈಕ್‌ ಮೇಲೆ ದನದ ಮಾಂಸವನ್ನು ಸಾಗಾಟ ಮಾಡುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ಸನವಳ್ಳಿ ಚಕ್ ಪೊಸ್ಟ ಹತ್ತಿರ ಪಿಎಸ್‌ಐ ಹನ್ಮಂತ ಕುಡಗುಂಟಿ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಒಬ್ಬನನ್ನು ಹಾಗೂ ಮಾಂಸವನ್ನು ವಶ ಪಡಿಸಿಕೊಂಡಿದ್ದಾರೆ.ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!