Thursday, June 1, 2023

Latest Posts

ಹೆರಿಗೆ ಡೇಟ್ ರಿವೀಲ್ ಮಾಡಿದ ನಟ ರಾಮ್ ಚರಣ್ ಪತ್ನಿ ಉಪಾಸನಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ತೆಲುಗಿನ ಖ್ಯಾತ ನಟ ರಾಮ್ ಚರಣ್ (Ram Charan) ಪತ್ನಿ ಉಪಾಸನಾ (Upasana) ಕುಟುಂಬ ಹೊಸ ಅತಿಥಿಯ ಆಗಮನದ ಕುಶಿಯಲ್ಲಿದ್ದು, ಯಾವ ಮಗು ಬರಲಿದೆ ಎನ್ನುವ ಪ್ರಶ್ನೆಯನ್ನು ಕೂಡ ಅಭಿಮಾನಿಗಳಲ್ಲೂ ಕಾಡುತ್ತಿದೆ. ಇದೀಗ ಆ ಕುರಿತು ಸ್ವತಃ ಉಪಾಸನಾ ಅವರೇ ಉತ್ತರಿಸಿದ್ದಾರೆ. ಜುಲೈನಲ್ಲಿ (July) ಹೆರಿಗೆ (Delivery) ಆಗಲಿದೆ ಎಂದು ವೈದ್ಯರು ತಿಳಿಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಈ ಹಿಂದೆ ರಾಮ್ ಚರಣ್ ತೇಜ ಅವರ ಮೊದಲ ಮಗುವಿನ ಜನನ (Childbirth) ಯಾವ ದೇಶದಲ್ಲಿ ಆಗಲಿದೆ ಎನ್ನುವ ಕುರಿತು ಚರ್ಚೆ ನಡೆದಿತ್ತು. ಅಮೆರಿಕಾದಲ್ಲೇ ಅವರು ಮೊದಲ ಮಗುವಿನ ಜನನಕ್ಕೆ ತಯಾರಿ ಮಾಡಿಕೊಂಡಿದ್ದಾರೆ ಎಂದು ಸುದ್ದಿ ಆಗಿತ್ತು. ರಾಮ್ ಚರಣ್ ಪತ್ನಿ ಉಪಾಸನಾ ಅವರ ಸಲಹೆ ಮೇರೆಗೆ ಇಂಥದ್ದೊಂದು ತೀರ್ಮಾನಕ್ಕೆ ಬಂದಿದ್ದಾರೆ ಎಂದು ಹೇಳಲಾಗಿತ್ತು.

ರಾಮ್ ಚರಣ್ ಪತ್ನಿ ಉಪಾಸನಾ ಈ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದು, ‘ಅಮೆರಿಕಾದಲ್ಲಿ ಹೆರಿಗೆಗೆ ತಯಾರಿ ಮಾಡಿಕೊಂಡಿದ್ದೇವೆ ಎನ್ನುವ ಸುದ್ದಿ ಸುಳ್ಳು. ಅದು ಯಾಕೆ ಈ ರೀತಿ ಹಬ್ಬಿತೋ ಗೊತ್ತಿಲ್ಲ. ನಮ್ಮ ಮಗುವಿನ ಜನನ ಭಾರತದಲ್ಲೇ ಆಗಲಿದೆ. ಸುಳ್ಳು ಸುದ್ದಿಗಳನ್ನು ನಂಬಬೇಡಿ’ ಎಂದಿದ್ದಾರೆ. ಭಾರತದಲ್ಲೇ ನಮ್ಮ ಮಗು ಜನಿಸಲಿದೆ ಎಂದು ಅವರು ಹೇಳಿದ್ದಾರೆ.

ರಾಮ್ ಚರಣ್ ಮತ್ತು ಉಪಾಸನಾ ದಂಪತಿ ತಡವಾಗಿ ಮಗು ಮಾಡಿಕೊಳ್ಳಲು ನಿರ್ಧರಿಸಿದ್ದರು. ಹಲವು ವರ್ಷಗಳ ನಂತರ ಉಪಾಸನಾ ಮಡಿಲಿಗೆ ಮಗು ಬರುತ್ತಿದೆ. ಹಾಗಾಗಿ ಸಹಜವಾಗಿಯೇ ದೊಡ್ಡ ಆಸ್ಪತ್ರೆಯಲ್ಲೇ ಮಗುವಿನ ಜನನ ಆಗಲಿದೆ ಎಂದು ಊಹಿಸಲಾಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!