ಹೊಸದಿಗಂತ ಡಿಜಿಟಲ್ ಡೆಸ್ಕ್:
‘ರಾಮಾಯಣ’ (Ramayana) ಧಾರಾವಾಹಿ ಯಾರಿಗೆ ತಾನೆ ನೆನಪಿಲ್ಲ.1987- 88ರಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಪ್ರಸಿದ್ಧ ಸೀರಿಯಲ್ ಎಲ್ಲರ ಮನಸ್ಸನೇ ಗೆದ್ದುಕೊಂಡಿತ್ತು.
ರಾಮ, ಲಕ್ಷ್ಮಣ, (Lakshmana) ಸೀತೆ, ಹನುಮಂತನ ಪಾತ್ರಧಾರಿಗಳಿಗೆ ವಿಶೇಷ ಮಾನ್ಯತೆ ನೀಡಲಾಗುತ್ತಿತ್ತು. ಜನರ ಜೀವನದ ಭಾಗವಾಗುತ್ತಿತ್ತು. ಅಇದೇ ಕಾರಣಕ್ಕೆ ಅಂದು ದೇವತೆಗಳ ಪಾತ್ರ ಮಾಡುವವರು ಮದ್ಯ, ಮಾಂಸಾಹಾರ ಸೇವನೆಯನ್ನು ಬಿಡುತ್ತಿದ್ದರು.
ಸಿನಿಮಾದಲ್ಲಿಯೂ ದೇವತೆಗಳ ಪಾತ್ರವನ್ನು ಮಾಡುವಂತೆ ಮದ್ಯ, ಮಾಂಸಾಹಾರ ಸೇವನೆ ಮಾಡುವ ನಾಯಕರಿದ್ದಾರೆ. ಡಾ.ರಾಜ್ಕುಮಾರ್ ಅವರು ರಾಘವೇಂದ್ರ ಸೇರಿದಂತೆ ಕೆಲವು ದೇವರ ಪಾತ್ರಗಳನ್ನು ಮಾಡುವ ವೇಳೆ ಮಾಂಸಾಹಾರ ಸೇವನೆ ಬಿಟ್ಟಿದ್ದ ಬಗ್ಗೆ ತಿಳಿಸಿದ್ದರು.
ಈಗ ಇದೇ ಸಾಲಿಗೆ ಸೇರಿದ್ದಾರೆ ನಟ ರಣಬೀರ್ ಕಪೂರ್. ರಾಮಾಯಣ ಆಧರಿಸಿ ಸಿದ್ಧವಾದ ‘ಆದಿಪುರುಷ್’ (Adipurush Movie) ದೊಡ್ಡ ಮಟ್ಟದಲ್ಲಿ ಫ್ಲಾಪ್ ಆದ ಬೆನ್ನಲ್ಲೇ ಇದೀಗ ರಾಮಾಯಣ ತೆರೆಯ ಮೇಲೆ ಬರಲಿದೆ. ಇದರಲ್ಲಿ ರಾಮನ ಪಾತ್ರಧಾರಿ ರಣಬೀರ್ ಕಪೂರ್ ಈಗ ಬಹಳ ಸುದ್ದಿಯಲ್ಲಿದ್ದಾರೆ.
ನಿತೀಶ್ ತಿವಾರಿ ಅವರು ರಾಮಾಯಾಣವನ್ನು ಮೂರು ಭಾಗದಲ್ಲಿ ತೆರೆಮೇಲೆ ತರುತ್ತಿದ್ದಾರೆ. ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ಹಾಗೂ ರಾವಣನಾಗಿ ಯಶ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇದರ ನಡುವೆಯೇ, ರಾಮನಾಗಿ ಮಿಂಚಲಿರುವ ರಣಬೀರ್ ಕಪೂರ್ ಮದ್ಯ, ಮಾಂಸಾಹಾರ ಸೇವನೆಯನ್ನು ಬಿಟ್ಟಿದ್ದಾರಂತೆ. ಇವರು ರಾಮನ ಪಾತ್ರ ಮಾಡುತ್ತಿರುವ ಬಗ್ಗೆ ಸಾಕಷ್ಟು ಅಪಸ್ವರ ಕೇಳಿ ಬಂದ ಬೆನ್ನಲ್ಲೇ ಇದನ್ನು ಅವರು ಘೋಷಿಸಿದ್ದಾರೆ.
ಇದೀಗ ರಣಬೀರ್ ಅವರು, ರಾಮಾಯಣದ ಶೂಟಿಂಗ್ ಮುಗಿಯುವವರೆಗೂ ತಾವು ಮದ್ಯ ಮತ್ತು ಮಾಂಸ ಸೇವನೆ ಮಾಡುವುದಿಲ್ಲ ಎಂದಿದ್ದಾರೆ.
ಯಾರು ಏನೇ ಹೇಳಿದರೂ ತಾವು ತಮ್ಮ ಮಾತಿಗೆ ಬದ್ಧ ಎಂದಿರುವ ನಟ, ರಾಮಾಯಣ ಸಿನಿಮಾದ ಶೂಟಿಂಗ್ ಮುಗಿಯುವವರೆಗೂ ಮದ್ಯ, ಮಾಂಸ ಮುಟ್ಟುವುದಿಲ್ಲ ಎಂದಿದ್ದಾರೆ. ಶ್ರೀರಾಮಚಂದ್ರನಷ್ಟೇ ಪರಿಶುದ್ಧವಾಗಿರುತ್ತೇನೆ ಎಂದಿದ್ದಾರೆ. ಇದನ್ನು ಕೇಳಿ ಸಸ್ಯಾಹಾರಿ ಪ್ರಿಯರು ತುಂಬಾ ಖುಷಿಯಾಗಿದ್ದಾರೆ. ನಮೋ ನಮಃ ನಿಮಗೆ ಎನ್ನುತ್ತಿದ್ದಾರೆ. ಜೈಶ್ರೀರಾಮ್ ಎಂದೂ ನಟನಿಗೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.