ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಾವ ರೀತಿ ಇಸ್ರೇಲ್ ಮೇಲೆ ಹಮಾಸ್ ಉಗ್ರರು ದಾಳಿ ಮಾಡಿದರು . ಅದೇ ಮಾದರಿಯಲ್ಲಿಯೇ ಭಾರತದ ಮೇಲೆ ದಾಳಿ ಮಾಡುವುದಾಗಿ ಖಲಿಸ್ತಾನಿ ಉಗ್ರ ಹಾಗೂ ಸಿಖ್ ಫಾರ್ ಜಸ್ಟೀಸ್‌ನ ನಾಯಕ ಗುರುಪತ್ವಂತ್ ಸಿಂಗ್ ಪನ್ನು ಎಚ್ಚರಿಕೆ ನೀಡಿದ್ದಾನೆ.
ಈ ಕುರಿತಾದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ. 40 ಸೆಕೆಂಡ್‌ನ ವಿಡಿಯೋ ಇದಾಗಿದ್ದು, ಇದರಲ್ಲಿ ಸ್ವತಃ ಗುರುಪತ್ವಂತ್ ಸಿಂಗ್ ಪನ್ನು ಮಾತನಾಡಿದ್ದಾನೆ. ‘ಮೋದಿ, ಇಸ್ರೇಲ್ ಇಂದು ಪ್ಯಾಲೆಸ್ತೇನ್‌ನಿಂದ ಆಕ್ರಮಣಕ್ಕೆ ಒಳಗಾಗಿದೆ. ಇಸ್ರೇಲ್ ಮಾದರಿಯಲ್ಲಿಯೇ ಭಾರತ ಪಂಜಾಬ್‌ನ ಮೇಲೆ ಹಿಡಿತ ಸಾಧಿಸಿದೆ. ಭಾರತ ಹಿಂಸೆ ಮಾಡಿದರೆ, ನಾವೂ ಹಿಂಸೆಯನ್ನು ಆರಂಭ ಮಾಡುತ್ತೇವೆ. ಹಾಗೇನಾದರೂ ಭಾರತ ಪಂಜಾಬ್‌ನ ಮೇಲೆ ತನ್ನ ಅತಿಕ್ರಮಣವನ್ನು ಮುಂದುವರಿಸಿದರೆ, ಇದಕ್ಕೆ ಖಂಡಿತವಾಗಿಯೂ ಪ್ರತಿಕ್ರಿಯೆ ಇರುತ್ತದೆ. ಇದಕ್ಕೆ ಮೋದಿ ಹಾಗೂ ಭಾರತವೇ ಜವಾಬ್ದಾರಿಯಾಗಿರುತ್ತದೆ. ಎಸ್‌ಎಫ್‌ಜೆ ಬ್ಯಾಲಟ್‌ನ ಮೇಲೆ ನಂಬಿಕೆ ಇಟ್ಟಿದೆ. ವೋಟ್‌ನ ಮೇಲೆ ನಂಬಿಕೆ ಇಟ್ಟಿದೆ. ಪಂಜಾಬ್‌ನ ಪ್ರತ್ಯೇಕ ಮಾಡುವ ದಿನ ಹತ್ತಿರವಾಗಿದೆ. ಬ್ಯಾಲಟ್ ಬೇಕೋ? ಬುಲೆಟ್ ಬೇಕೋ? ಭಾರತ ಆಯ್ಕೆ ನಿಮ್ಮದು’ ಎಂದು ಎಚ್ಚರಿಕೆ ನೀಡಿದ್ದಾರೆ.
SFJ terror group head Gurpatwant Pannu, has threatened to attack India in a manner similar to Hamas.
Pannu, nice joke 😆😆🙈🐴. All the best. 😂😂 pic.twitter.com/9FLpzBqudK
— The Analyzer (News Updates🗞️) (@Indian_Analyzer) October 10, 2023