ಆಕ್ಷನ್ ಸೀನ್ ಶೂಟ್ ವೇಳೆ ನಟ ರಣ್‌ದೀಪ್ ಹೂಡಾಗೆ ಗಾಯ: ಆಸ್ಪತ್ರೆಗೆ ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟ ರಣ್‌ದೀಪ್ ಹೂಡಾ ಶೂಟಿಂಗ್ ವೇಳೆ ಗಾಯಗೊಂಡಿದ್ದಾರೆ.
ತಮ್ಮ ಮೊದಲ ವೆಬ್ ಸೀರೀಸ್ ಇನ್ಸ್‌ಪೆಕ್ಟರ್ ಅವಿನಾಶ್ ಶೂಟಿಂಗ್‌ನಲ್ಲಿ ಆಕ್ಷನ್ ಸೀನ್ ಶೂಟ್ ವೇಳೆ ಗಾಯಗೊಂಡಿದ್ದಾರೆ. ತಕ್ಷಣವೇ ಸೆಟ್‌ನಲ್ಲಿದ್ದವರು ರಣ್‌ದೀಪ್ ಅವರನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾಗಿದ್ದಾರೆ.
ಆದರೆ ಶೂಟಿಂಗ್ ಮುಗಿದು ಬಿಡಲಿ, ನನ್ನಿಂದ ಶೂಟಿಂಗ್ ನಿಲ್ಲೋದು ಬೇಡ ಎಂದು ರಣ್‌ದೀಪ್ ಹೇಳಿದ್ದು, ಶೂಟ್ ಮುಗಿದ ನಂತರ ಸಂಜೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೀಗ ಅವರ ಆರೋಗ್ಯದಲ್ಲಿ ಚೇತರಿಕೆ ಕಾಣಿಸುತ್ತಿದೆ.

ಈ ಹಿಂದೆ ರಾಧೆ ಸಿನಿಮಾ ಶೂಟ್ ವೇಳೆ ರಣ್‌ದೀಪ್ ಗಾಯಗೊಂಡಿದ್ದರು, ಈಗಲೂ ಅದೇ ಜಾಗಕ್ಕೆ ಪೆಟ್ಟಾಗಿದ್ದು, ರಣ್‌ದೀಪ್ ಸೆಟ್‌ನಲ್ಲಿ ಪ್ರಥಮ ಚಿಕಿತ್ಸೆ ಪಡೆದು ಶೂಟ್ ಮುಗಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!