ನಟ ರಿಷಬ್ ಶೆಟ್ಟಿಗೆ ಸಿದ್ದಶ್ರೀ ಪ್ರಶಸ್ತಿ ಪ್ರದಾನ

ಹೊಸದಿಗಂತ ವರದಿ, ಕಲಬುರಗಿ:

ಜಿಲ್ಲೆಯ ಆಳಂದ ತಾಲೂಕಿನ ಶ್ರೀಕ್ಷೇತ್ರ ಜಿಡಗಾ ಸಿದ್ಧರಾಮ ಶಿವಯೋಗಿಗಳ ಪುಣ್ಯ ಭೂಮಿ ನೆಲದಲ್ಲಿ 38ನೇ ಗುರುವಂದನೆ ಸಮಾರಂಭದಲ್ಲಿ ಕನ್ನಡ ಚಲನಚಿತ್ರ ಕಾಂತಾರ ನಟ ಹಾಗೂ ನಿದೇ೯ಶಕ ರಿಷಬ್ ಶೆಟ್ಟಿ, ಗೆ ಮುಗಳಖೋಡ ಮಠದಿಂದ ಕೊಡಮಾಡುವ ರಾಷ್ಟ್ರೀಯ ಸಿದ್ದಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶುಕ್ರವಾರ ಸಂಜೆ ಜಿಡಗಾ ನವಕಲ್ಯಾಣ ಮಂಟಪದ ಆವರಣದಲ್ಲಿ ನಡೆದ ಗುರುವಂದನ ಸಮಾರಂಭಕ್ಕೆ ಭವ್ಯವಾದ ವೇದಿಕೆ ಸಿದ್ದಪಡಿಸಿ,ಮಠದ ಪೂಜ್ಯ ಷಡಕ್ಷರಿ ಶಿವಯೋಗಿ ಡಾ,ಮುರುಘರಾಜೇಂದ್ರ ಮಹಾಸ್ವಾಮಿಗಳು ಹಾಗೂ ಅಪಾರ ಪ್ರಮಾಣದ ಮಠಾಧೀಶರು ಪ್ರಶಸ್ತಿ ನೀಡಿ ಪ್ರದಾನ ಮಾಡಿದರು.

ತದನಂತರ ನಟ ರಿಷಬ್ ಶೆಟ್ಟಿ ಮಾತನಾಡಿ, ಈ ಮಹತ್ವದ ಘಳಿಗೆಯೂ ನಮ್ಮ ರಾಜ್ಯದ ಉತ್ಸವದ ಸಮಯವಾಗಿದೆ. ನನ್ನ ನಟನೆಯ ಕಾಂತಾರ ಸಿನೆಮಾಕ್ಕೆ ಸಿಗುತ್ತಿರುವ ಮೊದಲ ಪ್ರಶಸ್ತಿ ಸ್ವಾಮೀಜಿ ಅವರಿಂದ ಸಿಗುತ್ತಿರುವುದು ನಾನು ಮಾಡಿದ ಕೆಲಸಕ್ಕೆ ಸಾಥ೯ಕ ಸಿಕ್ಕಂತಾಗಿದೆ.ಈ ಪ್ರಶಸ್ತಿ ಮೂಲಕ ನನ್ನ ಜವಾಬ್ದಾರಿ ಹೆಚ್ಚಿಸಿದೆ ಎಂದರು.

ಈ ಪ್ರಶಸ್ತಿಯನ್ನು ನನಗೆ ಪ್ರೇರಣೆ ನೀಡಿದ ಪಂಜುರ್ಲಿ ದೈವರಿಗೆ, ಶ್ರೀ ಮಂಜುನಾಥ್ ಸ್ವಾಮಿ, ಹಾಗೂ ಅಣ್ಣಪ್ಪಾ ಸ್ವಾಮಿ, ದೈವ ನತ೯ಕರ ಕುಟುಂಬಕ್ಕೆ ಅಪ೯ಣೆ ಮಾಡುತ್ತೆನೆ ಎಂದರು.

ವಿಶೇಷವಾಗಿ ಈ ಪ್ರಶಸ್ತಿಯನು ಕನ್ನಡ ನಾಡಿನ ಮೇರುನಟ ಡಾ.ಪುನೀತ್ ರಾಜಕುಮಾರ್ ಹಾಗೂ ಕನ್ನಡ ಜನತೆಗೆ ಅಪಿ೯ಸುತ್ತೇನೆ ಎಂದರು.

ಕನಾ೯ಟಕದ ಭಾವನೆ,ನಂಬಿಕೆ ಒಳಗೊಂಡ ನಮ್ಮ ಮಣ್ಣಿನ ಕಥೆ ನಿಮಗೆಲ್ಲಾ ಇಷ್ಟವಾಗಿದ್ದು,ನನ್ನ ಹೆಮ್ಮೆಯ ವಿಷಯ. ನಾನು ಮೊದಲು ಬಣ್ಣ ಹಚ್ಚಿದ್ದು,ಯಕ್ಷಗಾನದ ಮೂಲಕವಾಗಿದೆ ಎಂದು ಹೇಳಿದ ಅವರು, ಎಲ್ಲರಿಗೂ ಚಿರರೂಣಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಕಾಂತಾರ ಸಿನೆಮಾ ಡೈಲಾಗ್ ಹೇಳಿದ ಅವರು , ನಿಮ್ಮ ಆಚರಣೆ,ಆಡಂಬರ ಹೀಗೆ ನಡದರೇ, ಬಂದು ಮಾಡಸತಿನಿ.ನಿನ್ನ ಅಪ್ಪನಿಗೆ ಹುಟ್ಟಿದರೆ ಬಂದ ಮಾಡಸಿ ನೋಡಾ..ಎಂಬ ಡೈಲಾಗ್ ಹೇಳಿ ಜನಸಮೂಹದ ಮನಗೆದ್ದರು.

1 ಲಕ್ಷ ನಗದು ಹಣ ,ಎರಡು ತೋಲೆ ಚಿನ್ನ, ಮೊಮೆಂಟಮ್ ಹಾಗೂ ಪ್ರಶಸ್ತಿ ಫಲಕ ನೀಡಿ ಹಲವು ಮಠಾಧೀಶರ ಹಾಗೂ ರಾಜಕೀಯ ಧುರೀಣರು ಹಾಗೂ ಲಕ್ಷಾಂತರ ಅಭಿಮಾನಿಗಳ ನಡುವೆ ರಿಷಬ್ ಶೆಟ್ಟಿ ಗೆ ಗೌರವಿಸಲಾಯಿತು.

ನಿರೂಪಕಿ ಅನುಶ್ರೀ ಹಾಗೂ ಗಾಯಕ ವಿಜಯ ಪ್ರಕಾಶ್ ತಂಡದಿಂದ ಸ್ವರ ಸಂಗೀತ ಕಾಯ೯ಕ್ರಮ ಜರುಗಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here