ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಸಸ್ಯೋದ್ಯಾನ ಲಾಲ್ ಬಾಗ್ ನಲ್ಲಿ ಪ್ರತೀ ವರ್ಷ ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಮೊಮ್ಮಗ ಯಶವಂತ್ ಅಂಬೇಡ್ಕರ್ ಅವರು ಕೂಡ ಭಾಗಿಯಾಗಿದ್ದಾರೆ. ಈ ಬಾರಿ ಲಕ್ಷಾಂತರ ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ.
ಈ ವರ್ಷ ಸಂವಿಧಾನ ಶಿಲ್ಪಿ ಡಾ ಬಿ.ಆರ್. ಅಂಬೇಡ್ಕರ್ ಅವರ ಕಾನ್ಸೆಪ್ಟ್ ನಲ್ಲಿ ಫ್ಲವರ್ ಶೋ ಮೂಡಿಬಂದಿದ್ದು, ಆಗಸ್ಟ್ 19ರವರೆಗೂ ನಲ್ಲಿ ಫ್ಲವರ್ ಶೋ ಇರಲಿದೆ. ಸಂಸತ್, ಭೀಮ ಸ್ಮರಾಕ, ಅಂಬೇಡ್ಕರ್ ಅವರು ಹುಟ್ಟಿದ ಜಾಗ, ಅವರು ಹುಟ್ಟಿ ಬೆಳೆದು ಬಂದಂತಹ ಹಾದಿ ಹೇಗಿತ್ತು ಎನ್ನುವುದು ಪ್ಲವರ್ ಶೋ ನ ಪ್ರಮುಖ ಆಕರ್ಷಣೆಗಳಾಗಿವೆ.
ಪ್ಲವರ್ ಶೋನಲ್ಲಿ 200 ಕ್ಕು ಹೆಚ್ಚು ಬಗೆಯ ಹೂಗಳು ಒಂದೇ ಸ್ಥಳದಲ್ಲಿ ಜನರನ್ನ ಮೋಡಿ ಮಾಡುತ್ತಿದ್ದು, ಒಟ್ಟು 35 ಲಕ್ಷ ಹೂಗಳನ್ನ ಪ್ಲವರ್ ಶೋಗೆ ಬಳಕೆ ಮಾಡಿಕೊಳ್ಳಲಾಗಿದೆ. ಇನ್ನು ಫ್ಲವರ್ ಶೋಗೆಂದೆ ಆಂಧ್ರ, ಊಟಿ, ತಮಿಳುನಾಡು ಸೇರಿದಂತೆ ಬೇರೆ ಬೇರೆ ಭಾಗದಿಂದ ಹೂಗಳು ಬಂದಿದ್ದು, ಲಾಲ್ ಬಾಗ್ನ ಗಾಜಿನ ಮನೆಯಲ್ಲಿ ಮೋಡಿ ಮಾಡಿವೆ.
ಈ ಹಿನ್ನೆಲೆಯಲ್ಲಿ ಸುಗಮ ಸಂಚಾರಕ್ಕೆ ಪ್ರಮುಖ ರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧ ಮಾಡಿ ಸಂಚಾರಿ ಪೊಲೀಸರಿಂದ ಆದೇಶ ಹೊರಡಿಸಲಾಗಿದೆ.
ಇಂದಿನಿಂದ 12 ದಿನಗಳವರೆಗೆ ಫ್ಲವರ್ ಶೋ ನಡೆಯಲಿದ್ದು, ಲಕ್ಷಾಂತರ ಜನರು ಭೇಟಿ ನಿರೀಕ್ಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ಬರುವ ಜನರಿಗೆ ವಾಹನ ನಿಲುಗಡೆಗೆ 4 ಕಡೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಆದಷ್ಟು ಜನರು ಮೆಟ್ರೋದಲ್ಲಿ ಬರಬೇಕಾಗಿ ವಿನಂತಿ ಮಾಡಲಾಗುತ್ತಿದೆ.