ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್ಬಾಸ್ ಸೀಸನ್ ಹೊಸ ಅಧ್ಯಾಯಕ್ಕೆ ನಟ ಶಿಶಿರ್ ಶಾಸ್ತ್ರಿ ಹಾಗೂ ತ್ರಿವಿಕ್ರಮ್ ಅವರು 8 ಹಾಗೂ 9ನೇ ಸ್ಪರ್ಧಿಯಾಗಿ ಬಿಗ್ಬಾಸ್ಗೆ ಬಂದಿದ್ದಾರೆ.
ನಟ ಶಿಶಿರ್ ಶಾಸ್ತ್ರಿ ಅವರು ಕನ್ನಡ ಸೀರಿಯಲ್ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಒಟ್ಟು 13 ವರ್ಷದಿಂದ ಕನ್ನಡ ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ.
ಸದ್ಯ ನಟ ಶಿಶಿರ್ ಶಾಸ್ತ್ರಿ ಅವರು ಬಿಗ್ಬಾಸ್ ಸ್ವರ್ಗಕ್ಕೆ ಹೋಗ್ಬೇಕಾ ಅಥವಾ ನರಕಕ್ಕೆ ಹೋಗಬೇಕಾ ಅಂತ ನಟಿ ಭವ್ಯಾ ಗೌಡ ಹಾಗೂ ನಟಿ ಯಮುನಾ ಅವರ ನಿರ್ಧಾರದ ಮೇಲೆ ನರಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ನಟ ತ್ರಿವಿಕ್ರಮ್ ಅವರು ಪದ್ಮಾವತಿ ಸೀರಿಯಲ್‌ನಲ್ಲಿ ಸಾಮ್ರಾಟ್ ಆಗಿ ನಟಿಸಿದ್ದರು. ನಟ ತ್ರಿವಿಕ್ರಮ್ ಅವರು ಇದೇ ಪದ್ಮಾವತಿ ಸೀರಿಯಲ್ ಮೂಲಕ ಸಾಕಷ್ಟು ಫೇಮಸ್ ಆಗಿದ್ದಾರೆ. ಬಿಗ್ಬಾಸ್ ಸ್ವರ್ಗಕ್ಕೆ ಹೋಗ್ಬೇಕಾ ಅಥವಾ ನರಕ್ಕಕೆ ಹೋಗಬೇಕಾ ಅಂತ ನಟಿ ಭವ್ಯಾ ಗೌಡ ಹಾಗೂ ನಟಿ ಯಮುನಾ ಅವರ ನಿರ್ಧಾರದ ಮೇಲೆ ನಟ ತ್ರಿವಿಕ್ರಮ್ ಅವರು ಸ್ವರ್ಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.