ಹೊಸದಿಗಂತ ಡಿಜಿಟಲ್ ಡೆಸ್ಕ್:
ನಂದಿನಿ ಹಾಲಿನ ಉತ್ಪನ್ನಗಳ ರಾಯಭಾರಿಯಾಗಿ ನಟ ಶಿವರಾಜ್ಕುಮಾರ್ ನೇಮಕಗೊಂಡಿದ್ದಾರೆ. ಕೆಎಂಎಫ್ ಅಧ್ಯಕ್ಷ ಭೀಮ ನಾಯಕ್ ಹಾಗೂ ಎಂಡಿ ಜಗದೀಶ್ ಅವರ ಮನವಿಗೆ ಸ್ಪಂದಿಸಿದ ನಟ ಶಿವರಾಜ್ಕುಮಾರ್ ರಾಯಭಾರಿಯಾಗಲು ಒಪ್ಪಿಗೆ ಸೂಚಿಸಿದ್ದಾರೆ.
ಇದಕ್ಕೂ ಮುನ್ನ ದಿವಂಗತ ಪುನೀತ್ ರಾಜಕುಮಾರ್ ಕೆಎಮ್ಎಫ್ ರಾಯಭಾರಿಯಾಗಿದ್ದರು. ಇದೀಗ ಶಿವರಾಜ್ಕುಮಾರ್ ನಂದಿನಿ ಹಾಲಿನ ಉತ್ಪನ್ನಗಳ ರಾಯಭಾರಿಯಾಗಿ ನೇಮಕವಾಗಿದ್ದಾರೆ.
ನೂತನ ರಾಯಭಾರಿ ನಟ ಶಿವರಾಜ್ ಕುಮಾರ್ ಅವರಿಗೆ ಅಧ್ಯಕ್ಷ ಬೀಮಾನಾಯಕ್ ಹೂಗುಚ್ಚ ನೀಡಿ ಅಭಿನಂದಿಸಿದ್ದಾರೆ.