Wednesday, November 29, 2023

Latest Posts

ನಟ ಸಿದ್ಧಾರ್ಥ್‌ ಪ್ರೆಸ್‌ಮೀಟ್‌ಗೆ ಕರವೇ ಕಾರ್ಯಕರ್ತರ ಅಡ್ಡಿ: ಕ್ಷಮೆ ಕೋರಿದ ಪ್ರಕಾಶ್‌ ರಾಜ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಿನ್ನೆ ಸಂಜೆ ಸಿದ್ಧಾರ್ಥ್‌ ʻಚಿಕ್ಕುʼ ಸಿನಿಮಾ ಪ್ರಮೋಷನ್‌ ಪ್ರೆಸ್‌ಮೀಟ್‌ ತಡೆದಿದ್ದಕ್ಕೆ ನಟ ಪ್ರಕಾಶ್‌ ರಾಜ್‌ ಅಸಮಾಧಾನ ಹೊರಹಾಕಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಪ್ರಕಾಶ್‌ ರಾಜ್‌, ʻಕಾವೇರಿ ನಮ್ಮದು ಹೌದು.. ನಮ್ಮದೇ.. ಆದರೆ.. ದಶಕಗಳ ಈ ಸಮಸ್ಯೆಯನ್ನು ಪರಿಹರಿಸಲಾರದ ಎಲ್ಲಾ ಅಸಮರ್ಥ ರಾಜಕೀಯ ಪಕ್ಷಗಳನ್ನು, ನಾಯಕರನ್ನು ಪ್ರಶ್ನಿಸದೆ ಕೇಂದ್ರ ಸರ್ಕಾರಕ್ಕೆ ಒತ್ತಡ ತರದ ನಾಲಾಯಕ್ ಸಂಸದರನ್ನು ತರಾಟೆಗೆ ತೆಗೆದುಕೊಳ್ಳಬೇಕಿತ್ತು. ಆದರೆ ಹೀಗೆ ಅಸಹಾಯಕ ಜನಸಾಮಾನ್ಯರನ್ನು, ಕಲಾವಿದರನ್ನು ಹಿಂಸಿಸುವುದು ತಪ್ಪು. ಒಬ್ಬ ಕನ್ನಡಿಗನಾಗಿ ಸಹ್ರುದಯ ಕನ್ನಡಿಗರ ಪರವಾಗಿ ಕ್ಷಮಿಸಿ ಎಂದು ನಟ ಸಿದ್ಧಾರ್ಥ್‌ ಅವರಲ್ಲಿ ಕ್ಷಮೆ ಕೋರಿದ್ದಾರೆ. 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!