ಪುಟ್ಟ ಬಾಲಕಿಯ ಬದುಕಿಗೆ ಅಸೆರೆಯಾದ ನಟ ಸೋನು ಸೂದ್​ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಿಹಾರದ ನವಾಡ ಜಿಲ್ಲೆಯ ನಾಲ್ಕು ಕೈಗಳು ಮತ್ತು ನಾಲ್ಕು ಕಾಲುಗಳೊಂದಿಗೆ ಜನಿಸಿದ ಬಾಲಕಿಗೆ ನಟ ಸೋನು ಸೂದ್​ ಜೀವನದ ಬೆಳಕಾಗಿದ್ದರೆ.
ಸೋನು ಸೂದ್ ತಮ್ಮ ಕಿರಿಯ ಮಗಳು ಚೌಮುಖಿ ಕುಮಾರಿಗೆ ಆಪರೇಷನ್​ ಮಾಡಿಸಿದ್ದಕ್ಕಾಗಿ ಪೋಷಕರು ಕೃತಜ್ಞತೆ ಸಲ್ಲಿಸಿದ್ದಾರೆ.

ಬಾಲಕಿ ಚೌಮುಖಿಯ ಸಂಕಟ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ವಿಷಯ ಬಾಲಿವುಡ್ ನಟ ಸೋನು ಸೂದ್ ತಲುಪಿದ ನಂತರ ಆಕೆಯನ್ನು ಮುಂಬೈಗೆ ಕರೆತರುವಂತೆ ಪೋಷಕರನ್ನು ಕೇಳಿಕೊಂಡಿದ್ದರು. ಬಾಲಕಿಯನ್ನು ಮುಂಬೈನಲ್ಲಿ ವೈದ್ಯರು ಪರೀಕ್ಷಿಸಿದರು. ನಂತರ ಅವರು ಸೂರತ್‌ನಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಗೆ ಒಳಪಡಿಸಿದ್ದರು. ಈಗ ಬಾಲಕಿ ಸಾಮಾನ್ಯ ಜೀವನವನ್ನು ನಡೆಸಬಹುದಾಗಿದೆ. ಈ ಬಗ್ಗೆ ಪತ್ರಕರ್ತರೊಬ್ಬರು ಟ್ವೀಟ್​ ಮಾಡಿದ್ದನ್ನು ರೀ ಟ್ವೀಟ್​ ಮಾಡಿರುವ ಸೂದ್​, ಬಾಲಕಿಯನ್ನು ಹರಸಿದ್ದಾರೆ.
ಚೌಮುಖಿಯ ಹಿರಿಯ ಸಹೋದರ ಮತ್ತು ಸಹೋದರಿಯ ಶಿಕ್ಷಣದ ವೆಚ್ಚವನ್ನು ಸೂದ್ ಭರಿಸುವುದಾಗಿಯೂ ಭರವಸೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!