ಹೊಸದಿಗಂತ ವರದಿ, ಅಂಕೋಲಾ:
ಯಲ್ಲಾಪುರ – ಮುಂಡಗೋಡ – ಬನವಾಸಿ ಭಾಗದ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 27.40 ಕೋಟಿ ರೂಪಾಯಿ ವಿಶೇಷ ಅನುದಾನ ಮಂಜೂರಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದ್ದಾರೆ.
‘ನನ್ನ ಮತ ಕ್ಷೇತ್ರದ ಯಲ್ಲಾಪುರ – ಮುಂಡಗೋಡ – ಬನವಾಸಿ ಭಾಗದ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮೂಲಕವಾಗಿ 27.40 ಕೋಟಿ ರೂಪಾಯಿ ವಿಶೇಷ ಅನುದಾನವು ಮಂಜೂರಾಗಿರುವುದನ್ನು ತಿಳಿಸುವುದಕ್ಕೆ ಸಂತಸವಾಗುತ್ತಿದೆ. ಕ್ಷೇತ್ರದ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಯ ನನ್ನ ಸಂಕಲ್ಪಕ್ಕೆ ಹೆಚ್ಚಿನ ಅನುದಾನವನ್ನು ಮಂಜೂರು ಮಾಡುವ ಮೂಲಕವಾಗಿ ಬಲ ತುಂಬಿದ ನಾಡಿನ ಜನಪ್ರಿಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಕೃತ ಜ್ಞ ತೆ ಸಲ್ಲಿಸುತ್ತೇನೆ ಹೆಬ್ಬಾರ್ ಎಂದಿದ್ದಾರೆ.