ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಸುದೀಪ್ ತಿರುಪತಿಗೆ (Thirupathi Thimmappa) ಭೇಟಿ ನೀಡಿ ತಿಮ್ಮಪ್ಪನ ದರುಶನ ಪಡೆದಿದ್ದಾರೆ.
ಹಲವು ದಿನಗಳಿಂದ ಕಿರಿಕಿರಿ ಅನುಭವಿಸುತ್ತಿದ್ದ ಕಿಚ್ಚ, ಇದೀಗದೇವರ ದರುಶನ ಪಡೆದುಕೊಂಡು ನಿರಾಳರಾಗಿದ್ದಾರೆ. ಸದ್ಯ ಕಿಚ್ಚನ 46 ಸಿನಿಮಾಗೆ ಸಿದ್ಧತೆ ನಡೆಯುತ್ತಿದೆ. ಹೊಸ ಸಿನಿಮಾದ ಶೂಟಿಂಗ್‌ನತ್ತ ಮುಖ ಮಾಡಿದ್ದಾರೆ.
ʼವಿಕ್ರಾಂತ್ ರೋಣ’ (Vikrant Rona) ಸಿನಿಮಾ 2022ರಲ್ಲಿ ರಿಲೀಸ್ ಆಯಿತು. ಇದಾದ ಬಳಿಕ ಸುದೀಪ್ ಒಂದು ಬ್ರೇಕ್ ಪಡೆದರು. ವೃತ್ತಿ ಜೀವನದಲ್ಲಿ ಅವರು ಪಡೆದ ಮೊದಲ ಬ್ರೇಕ್ ಇದು ಅನ್ನೋದು ವಿಶೇಷ. ಈ ಸಮಯದಲ್ಲಿ ಸುದೀಪ್ ಅವರು ಕುಟುಂಬಕ್ಕೆ ಹೆಚ್ಚು ಆದ್ಯತೆ ಕೊಟ್ಟರು. ಚುನಾವಣಾ ಪ್ರಚಾರದಲ್ಲಿ ಭಾಗಿ ಆದರು. ಈಗ ಅವರು ಶೂಟಿಂಗ್ ಹೊರಡೋಕೆ ರೆಡಿ ಆಗಿದ್ದಾರೆ.
‘K 46’ ಚಿತ್ರದ ಶೂಟಿಂಗ್ ಆಗಸ್ಟ್ ಮೊದಲ ವಾರದಿಂದ ಪ್ರಾರಂಭ ಆಗಲಿದೆ. 55 ದಿನಗಳ ಸುದೀರ್ಘ ಶೆಡ್ಯೂಲ್‌ನಲ್ಲಿ ಚಿತ್ರೀಕರಣ ನಡೆಯಲಿದೆ. ತಮಿಳುನಾಡಿನ ಮಹಾಬಲಿಪುರಂನಲ್ಲಿ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಯಲಿದೆ. ಸಿನಿಮಾದ ಮೊದಲ ಝಲಕ್ ಸಂಚಲನ ಮೂಡಿಸಿದೆ. ನಾನು ಮನುಷ್ಯನಲ್ಲ ರಾಕ್ಷಸ ಎನ್ನುವ ಕಿಚ್ಚನ ಖಡಕ್ ಡೈಲಾಗ್ ಫ್ಯಾನ್ಸ್ ಕಿಕ್ ಕೊಟ್ಟಿತ್ತು. ಈಗ ಸಿನಿಮಾ ಚಿತ್ರೀಕರಣಕ್ಕೆ ಕೌಂಟ್‌ಡೌನ್ ಶುರುವಾಗಿದೆ.