ವ್ಯಕ್ತಿ ಮೇಲೆ ಹಲ್ಲೆ ನಡೆಸಿ ಕೊಲೆ ಯತ್ನ: ಖ್ಯಾತ ಮಲಯಾಳಂ ನಟ ಅರೆಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್
ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಆರೋಪದ ಮೇಲೆ ಮಲಯಾಳಂ ನಟ ವಿನೀತ್ ಥಟ್ಟಿಲ್ ಅವರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಕೇರಳದ ಅಲಪ್ಪುಳ ನಿವಾಸಿ ಅಲೆಕ್ಸ್ ಎಂಬ ವ್ಯಕ್ತಿಯ ಮೇಲೆ ಕೊಲೆ ಯತ್ನದ ಆರೋಪದ ಮೇಲೆ ವಿನೀತ್‌ನನ್ನು ಜೈಲಿಗೆ ಹಾಕಲಾಗಿದೆ. ಕೇರಳ ಪೊಲೀಸರ ಪ್ರಕಾರ, ವಿನೀತ್ ಅವರು ಜುಲೈ 24ರಂದು ಹಣಕಾಸಿನ ವಿವಾದಕ್ಕೆ ಸಂಬಂಧಿಸಿದಂತೆ ಅಲೆಕ್ಸ್ ಮೇಲೆ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅಲೆಕ್ಸ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲೆಕ್ಸ್ ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ  ದೂರು ನೀಡಿದ್ದರು. ವಿನೀತ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 308 (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಲೆಕ್ಸ್ ವಿನೀತ್‌ಗೆ ನೀಡಬೇಕಿದ್ದ ಹಣವನ್ನು ಕೇಳಲು ಭೇಟಿ ನೀಡಿದಾಗ ವಿಷಯ ಕೈ ಮೀರಿತು. ವಿನೀತ್ ಅಲೆಕ್ಸ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ತಮ್ಮ ಕೈಗೂ ಗಾಯ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಅಂಗಮಾಲಿ ಡೈರೀಸ್ ಮೂಲಕ ತಮ್ಮ ನಟನಾ ಪಯಣವನ್ನು ಪ್ರಾರಂಭಿಸಿದ್ದ ವಿನೀತ್ ಅವರು ಮಳಯಾಳಂ ಚಿತ್ರರಂಗದಲ್ಲಿ ಖ್ಯಾತಿ ಪಡೆದಿದ್ದು, ಪೃಥ್ವಿರಾಜ್ ಸುಕುಮಾರನ್ ಮತ್ತು ಬಿಜು ಮೆನನ್ ಅಭಿನಯದ ಅಯ್ಯಪ್ಪನುಮ್ ಕೊಶಿಯುಂನಲ್ಲಿ ಪ್ರಮುಖ ಪಾತ್ರದಿಂದ ಹೆಸರುಗಳಿಸಿದ್ದಾರೆ. ಇದಲ್ಲದೆ, ಆನು 2, ತ್ರಿಶೂರ್ ಪೂರಂ, ಹಲೋ ಸೇರಿದಂತೆ ಹಲವಾರು ಪ್ರಖ್ಯಾತ ಚಿತ್ರಗಳಲ್ಲಿ ನಟಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!