ನನ್ನ ತಡೆದರು, ಕೈ ಒಳಗಿಂದ ತೂರಿ ʻಮೋದಿʼ ಬಳಿಹೋದೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೂಡುಬಿದಿರೆ: ʻಸೆಕ್ಯೂರಿಟಿಗಳು ನನ್ನ ತಡೆದರು, ಅವರ ಕೈ ಅಡಿಯಿಂದ ತೂರಿ ಮೋದಿಬಳಿಹೋಗಿ ಸೆಲ್ಫಿ ಕ್ಲಿಕ್ಕಿಸಿಕೊಂಡೆ; ನಾನುಟ್ಟ ಕಚ್ಚೆ ಪಂಚೆಯನ್ನು ಎಳೆದಿದ್ದರು. ಒಂದು ಕೈಯಿಂದ ಅದನ್ನು ಹಿಡಿದುಕೊಂಡೇ ಸೆಲ್ಫಿ ತೆಗೆದೆ. ಕರ್ನಾಟರ ರಾಜ್ಯದ ಶಿಕ್ಷಣ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿ, ಉಡಾಫೆಯಿಂದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆ ಉಂಟಾಗಿತ್ತುʼ ಇದು ರೋಟರಿ ಆಂಗ್ಲಮಾಧ್ಯಮ ಶಾಲೆಯ ಹತ್ತನೇತರಗತಿಯ ವಿದ್ಯಾರ್ಥಿ ಪ್ರಹ್ಲಾದ ಮೂರ್ತಿ ಅವರ ಮಾತು.

ಶಾಲೆಯ ಸಮ್ಮಿಲನ ಸಭಾಂಗಣದಲ್ಲಿ ಗುರುವಾರ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡ ಅವರು ಜ.೨೭ರಂದು ನವದೆಹಲಿಯಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಆಯೋಜಿಸಿದ ಪರೀಕ್ಷಾಪೆ ಚರ್ಚಾ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅನುಭವ ಹಂಚಿಕೊಂಡರು. ಕರ್ನಾಟಕ ರಾಜ್ಯದಿಂದ ಆಯ್ಕೆಯಾದ ೪ರಲ್ಲಿ ಪ್ರಹ್ಲಾದ ಮೂರ್ತಿ ಒಬ್ಬರು. ಒಡಿಸ್ಸಾದಲ್ಲಿ ನಡೆದ ರಾಷ್ಟ್ರಮಟ್ಟದ ಕಲೋತ್ಸವದಲ್ಲಿ ನಾಟಕ ವಿಭಾಗದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದರು. ಈ ಸಾಧನೆಯನ್ನು ಪರಿಗಣಿಸಿ ಅವರಿಗೆ ಪರೀಕ್ಷಾಪೇ ಚರ್ಚೆಯಲ್ಲಿ ಪಾಲ್ಗೊಳ್ಳುವ ಅವಕಾಶ ಲಭಿಸಿತ್ತು.

ಅಧಿಕಾರಿಗಳ ಬೇಜವಾಬ್ದಾರಿ: ಕಲೋತ್ಸವ ಹಾಗೂ ಪರೀಕ್ಷ ಪೆ ಚರ್ಚಾ ಕಾರ್ಯಕ್ರಮಕ್ಕೆ ರಾಜ್ಯವನ್ನು ಪ್ರತಿನಿಧಿಸುವ ವಿದ್ಯಾರ್ಥಿಗಳ ಸಂಪೂರ್ಣ ಜವಾಬ್ದಾರಿಯನ್ನು ಕರ್ನಾಟಕ ಸರಕಾರದ ಶಿಕ್ಷಣ ಇಲಾಖೆಯ ಭಾಗವಾದ ಡಿ ಎಸ್‌ ಇ ಆರ್‌ ಟಿ ವಿಭಾಗ ವಹಿಸಬೇಕಾಗಿತ್ತು. ನೋಡೆಲ್‌ ಅಧಿಕಾರಿಗಳು, ಅಧಿಕಾರಿಗಳ ಅಸಮರ್ಪಕ ಸಂವಹನ, ಹಾಗೂ ಬೇಜವಾಬ್ದಾರಿ ವರ್ತನೆಯಿಂದಾಗಿ ವಿದ್ಯಾರ್ಥಿಗಳಿಗೆ ಸಕಾಲಕ್ಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದೆ ತೀವ್ರ ತೊಂದರೆಯುಂಟಾಯಿತು. ಬಳಿಕ ಸಂಸದ, ಶಾಸಕ, ಸೇರಿದಂತೆ ಪೇಜಾವರ ಶ್ರೀಗಳ ಸಹಕಾರದೊಂದಿಗೆ ಪೆರೇಡ್‌ಗೆ ಹಾಗೂ ಪರೀಕ್ಷ ಪೆ ಚರ್ಚೆಯಲ್ಲಿಪಾಲ್ಗೊಳ್ಳುವ ಅವಕಾಶ ಲಭಿಸಿತು. ಅಧಿಕಾರಿಗಳ ಬೇಜವಾಬ್ದಾರಿಯಿಂದ ಕರ್ನಾಟಕದ ವಿದ್ಯಾರ್ಥಿಗಳಿಗೆ ತೀವ್ರ ನೋವುಂಟಾಗಿದೆ. ವೈಯಕ್ತಿಕ ನೆಲೆಯಲ್ಲಿ ಅಧಿಕಾರಿಗಳ ವರ್ತನೆಯನ್ನು ಖಂಡಿಸಿ ದಾವೆ ಹೂಡಿರುತ್ತೇನೆ ಎಂದು ಪ್ರಹ್ಲಾದ ಮೂರ್ತಿ ಹೇಳಿದರು.

ಇತರೆ ರಾಜ್ಯಗಳನ್ನು ಪ್ರತಿನಿಧಿಸುವ ವಿದ್ಯಾರ್ಥಿಗಳು ದೆಹಲಿಗೆ ತೆರಳಲು ವಿಮಾನದ ವ್ಯವಸ್ಥೆ ಮಾಡಲಾಗಿತ್ತು. ಕರ್ನಾಟದ ಅಧಿಕಾರಿಗಳು ರೈಲ್ವೇ ವ್ಯವಸ್ಥೆ ಮಾಡಿ ಕೈತೊಳೆದುಕೊಂಡಿದ್ದರು. ಒಂದೇ ಬೋಗಿಯಲ್ಲಿ ಟಿಕೇಟ್‌ ವ್ಯವಸ್ಥೆ ಮಾಡದೆ ಅಲ್ಲೂ ತೊಂದರೆ ನೀಡಿದ್ದಾರೆ. ಊಟದ ವ್ಯವಸ್ಥೆಯಲ್ಲೂ ಅವ್ಯವಸ್ಥೆ ಮಾಡಿದ್ದಾರೆ ಎಂದು ದೂರಿದರು. ನಮಗಾದ ಕಹಿ ಅನುಭವ ಇನ್ಯಾವ ವಿದ್ಯಾರ್ಥಿಗಳಿಗೆ ಆಗದಿರಲಿ ಎಂಬ ಸದುದ್ದೇಶದಿಂದ ದೂರು ನೀಡಿರುತ್ತೇನೆ. ಪ್ರಧಾನಿಯವರಿಗೆ ತನ್ನ ಸಹೋದರ ಟ್ವೀಟ್‌ ಮೂಲಕವೂ ದೂರು ನೀಡಿದ್ದಾರೆ ಎಂದು ಹೇಳಿದರು.

ರೋಟರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾರಾಯಣ ಪಿ.ಎಂ, ಮುಖ್ಯಸ್ಥರುಗಳಾದ ಅಬ್ದುಲ್‌ ರವೂಫ್‌, ಮೋಹನ್‌ ಭಟ್‌, ಶೀಲಾ ಕಾಂತರಾಜ್‌, ರೂಪ ಮಸ್ಕರೇನಿಯಸ್‌, ತಿಲಕ ಅನಂತವೀರ್‌ ಜೈನ್‌, ಪ್ರವೀಣ್‌ ಚಂದ್ರ ಜೈನ್‌ , ಮೋಹನ್‌ ಹೊಸ್ಮಾರ್‌, ಸತೀಶ್‌, ನಿತೀಶ್‌ ಕುಮಾರ್‌, ಗಜಾನನ ಮರಾಠೆ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!