ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರೂ ನಟಿ ಅದಾ ಶರ್ಮಾಗೆ ಹೆಸರು ತಂದುಕೊಟ್ಟಿದ್ದು ದಿ ಕೇರಳ ಸ್ಟೋರಿ, ಕನ್ನಡದಲ್ಲಿಯೂ ಅದ ರಣವಿಕ್ರಮ ಸಿನಿಮಾದಲ್ಲಿ ನಟಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟೀವ್ ಆಗಿದ್ದು, ಶೂಟ್‌ನಲ್ಲಿಯೂ ಬ್ಯುಸಿ ಇದ್ದ ಅದಾ ಶರ್ಮಾ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಫುಡ್ ಅಲರ್ಜಿಯಿಂದಾಗಿ ಅದಾ ಆಸ್ಪತ್ರೆ ಸೇರಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಇದೀಗ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಸದ್ಯ ಅದಾ ನೆಕ್ಸ್ಟ್ ಸಿನಿಮಾ ಕಮಾಂಡೋ ಇನ್ನೇನು ಕೆಲವೇ ದಿನಗಳಲ್ಲಿ ರಿಲೀಸ್ ಆಗಲಿದೆ, ಪ್ರಚಾರ ಆರಂಭಿಸಬೇಕಿದ್ದ ಅದಾಗೆ ಅನಾರೋಗ್ಯ ಕಾಡಿದ್ದು, ಸ್ವಲ್ಪ ದಿನಗಳ ನಂತರ ಪ್ರಚಾರ ಮಾಡಲಿದ್ದಾರೆ.