ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಯುಷ್ ಹಾಗೂ ಇನ್ನಿತರ ಭಾರತೀಯ ವೈದ್ಯಕೀಯ ಚಿಕಿತ್ಸೆ ಪಡೆಯಲು ಬೇರೆ ದೇಶಗಳಿಂದ ಬರುವವರಿಗೆ ಕೇಂದ್ರ ಸರ್ಕಾರ ನೂತನ ವೀಸಾ ಪರಿಚಯಿಸಿದೆ.
ಭಾರತೀಯ ವೈದ್ಯಕೀಯ ವ್ಯವಸ್ಥೆಗಳ ಅಡಿಯಲ್ಲಿ ಚಿಕಿತ್ಸೆಗಾಗಿ ಭಾರತಕ್ಕೆ ಬರುವ ವಿದೇಶಿ ಪ್ರಜೆಗಳಿಗೆ ಆಯುಷ್ ವೀಸಾ ಎಂಬ ಹೊಸ ವರ್ಗ ರಚಿಸಲಾಗಿದೆ.
ಆಯುಷ್ ಸಚಿವಲಾಯದ ಪ್ರಕಾರ ಚಿಕಿತ್ಸೆ, ಆರೈಕೆ. ಕ್ಷೇಮ ಹಾಗೂ ಯೋಗದ ರೀತಿಯ ಭಾರತೀಯ ವೈದ್ಯಕೀಯ ವ್ಯವಸ್ಥೆಗಳ ಅಡಿಯಲ್ಲಿ ಚಿಕಿತ್ಸೆಗೆ ಬರುವವರಿಗೆ ವಿಶೇಷ ವೀಸಾ ಯೋಜನೆ ರಚಿಸಿ ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.
ಆಯುಷ್ ವೀಸಾದಿಂದ ಭಾರತೀಯ ವೈದ್ಯಕೀಯ ಮೌಲ್ಯ ಹೆಚ್ಚಾಗುತ್ತದೆ. ಭಾರತೀಯ ಸಾಂಪ್ರದಾಯಕ ಔಷಧವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಸಹಾಯವಾಗುತ್ತದೆ.