ಹಸೆಮಣೆ ಏರಲು ಸಜ್ಜಾದ ನಟಿ ಅದಿತಿ ಪ್ರಭುದೇವ: ಆಮಂತ್ರಣ ಪತ್ರಿಕೆ ವೈರಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸ್ಯಾಂಡಲ್​ವುಡ್​ ನಟಿ ಅದಿತಿ ಪ್ರಭುದೇವ ಅವರ ಮದುವೆ ಡೇಟ್​ ಫಿಕ್ಸ್​ ಆಗಿದ್ದು, ಕೊಡಗು ಮೂಲದ ಉದ್ಯಮಿ ಯಶಸ್ವಿ ಜೊತೆ ಇದೇ ನವೆಂಬರ್ 27 ಮತ್ತು 28ರಂದು ಹಸೆಮಣೆ ಏರಲಿದ್ದಾರೆ.

ಪೇಸ್ಟಲ್ ಗ್ರೀನ್ ಬಣ್ಣ ಫ್ಲೋರಲ್ ಮದ್ವೆ ಕಾರ್ಡ್‌ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮದ್ವೆಗೆ ಪೋಷಕರಾದ ಸುಚರಿತ ಮತ್ತು ಚಂದ್ರಕಾಂತ್ ಆಹ್ವಾನಿಸುತ್ತಿದ್ದಾರೆ.

ಮದುವೆ ಆಹ್ವಾನ ಪತ್ರಿಕೆಯಲ್ಲಿ ‘ಕರುನಾಡ ತಾಯಿ ಭುವನೇಶ್ವರಿ ಆಶೀರ್ವಾದದೊಂದಿಗೆ’ ಎಂದು ಹಾಕಿಸಿಕೊಂಡಿದ್ದು,

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ನಮ್ಮ ಮನೆ, ಮನಸ್ಸುಗಳ ಸೇರಲು ಬಯಸಿರುವಳು ಅದಿತಿ. ಹೃದಯ ತೆರೆದು ಮೌನ ಮುರಿದು ಪ್ರೀತಿಯ ಸಿಂಪಡಿಸಿ ಕಾದಿರುವನು ಯಶಸ್ವಿ’ ಎಂದು ಆಮಂತ್ರಣ ಪತ್ರಿಕೆಯಲ್ಲಿ ಬರೆದಿದ್ದಾರೆ.

ಕನ್ನಟ ರಾಜ್ಯೋತ್ಸವ ತಿಂಗಳಲ್ಲೇ ದಾಂಪತ್ಯ ಜೀವನಕ್ಕೂ ಕಾಲಿಡುತ್ತಿರುವ ಅದಿತಿ ಅವರಿಗೆ ಲಕ್ಷಾಂತರ ಅಭಿಮಾನಿಗಳು ಶುಭಕೋರುತ್ತಿದ್ದಾರೆ.

ದಾವಣಗೆರೆ ಮೂಲದ ಅದಿತಿ ಮೊದಲು ನಾಗಕನ್ನಿಕೆ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶಿಸಿದ್ದು, ನಂತರ ಧೈರ್ಯಂ ಸಿನಿಮಾ ಮೂಲಕ ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದ್ದರು. ಸಿಂಗ, ಬಜಾರ್, ರಂಗನಾಯಕಿ, ಬ್ರಹ್ಮಚಾರಿ ,ತೋತಾಪುರಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!