ತಂದೆಯ ವಿರುದ್ಧವೇ ಕೊಲೆ ಆರೋಪ ಮಾಡಿದ ನಟಿ ಅರ್ಥನಾ ಬಿನು!

ಹೊಸದಿಗಂತ ಡಿಜಿಟಲ್ ಡೆಸ್ಕ್ :

ಬಹುಭಾಷಾ ನಟಿ ಅರ್ಥನಾ ಬಿನು ತನ್ನ ತಂದೆಯ ವಿರುದ್ಧವೇ ಕೊಲೆ ಆರೋಪ ಮಾಡಿದ್ದಾರೆ.ತಮ್ಮ ಮನೆಗೆ ಅಕ್ರಮವಾಗಿ ನುಗ್ಗಿ ತೊಂದರೆ ಮಾಡುತ್ತಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ನಟಿ ಅರ್ಥನಾ ಬಿನು ತಂದೆ ಮಲಯಾಳಂನಲ್ಲಿ ನಟರೂ ಆಗಿರುವ ವಿಜಯಕುಮಾರ್ . ವಿಜಯ್ ಕುಮಾರ್ ಮತ್ತು ಅರ್ಥನಾ ಬಿನು ತಾಯಿ ಡಿವೋರ್ಸ್ ಆಗಿ ಹಲವು ವರ್ಷಗಳೇ ಕಳೆದಿವೆ. ಇದೀಗ ಅರ್ಥನಾ ತನ್ನ ತಾಯಿಯೊಂದಿಗೆ ಅಜ್ಜಿ ಮನೆಯಲ್ಲಿ ಇದ್ದಾರೆ. ತಂದೆಯಿಂದ ದೂರವಾಗಿ ನೆಮ್ಮದಿಯ ದಿನಗಳನ್ನು ಕಳೆಯುತ್ತಿರುವ ಈ ಕುಟುಂಬಕ್ಕೆ ತಂದೆಯೇ ವಿಲನ್ ಆಗಿದ್ದಾರೆ ಎಂದು ಅರ್ಥನಾ ಹೇಳಿಕೆ.

ವಿಜಯಕುಮಾರ್ ಮನೆಯ ಕಾಂಪೌಂಡ್ ಹಾರಿ, ಅನಧಿಕೃತವಾಗಿ ಮನೆಯೊಳಗೆ ಪ್ರವೇಶ ಮಾಡುವುದು ಮತ್ತು ಕಿಟಕಿಯಾಚೆ ನಿಂತು ಮಾತನಾಡುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿರುವ ನಟಿ, ‘ಸಿನಿಮಾಗಳಲ್ಲಿ ಮುಂದುವರೆಯದಂತೆ ನನ್ನ ತಂದೆ ಬೆದರಿಕೆ ಹಾಕುತ್ತಿದ್ದಾರೆ. ಸಿನಿಮಾದಲ್ಲಿ ಮುಂದುವರೆದರೆ ಕೊಲ್ಲುವುದಾಗಿ ಹೇಳುತ್ತಿದ್ದಾರೆ. ನಾನು ನಟಿಸುತ್ತಿರುವ ಚಿತ್ರತಂಡದ ವಿರುದ್ಧವೂ ನಿಂದನೆ ಮಾಡಿದ್ದಾರೆ. ಅವರು ಅಕ್ರಮವಾಗಿ ಮನೆ ಪ್ರವೇಶ ಮಾಡುತ್ತಾರೆ. ನಿಂದಿಸುತ್ತಾರೆ’ ಎಂದೆಲ್ಲ ಬರೆದುಕೊಂಡಿದ್ದಾರೆ.

ಪೊಲೀಸ್ ಠಾಣೆಗೆ ಕಾಲ್ ಮಾಡಿದರೆ, ಪೊಲೀಸ್ ನವರು ಸರಿಯಾದ ರೀತಿಯಲ್ಲಿ ಸ್ಪಂದಿಸಲ್ಲ ಎನ್ನುವ ಆರೋಪವನ್ನೂ ಈ ನಟಿ ಮಾಡಿದ್ದಾರೆ. ತಮಗೆ ಜೀವ ಬೆದರಿಕೆಯಿದ್ದು, ಪೊಲೀಸರು ಸೂಕ್ತ ಕ್ರಮವನ್ನು ತೆಗೆದುಕೊಳ್ಳಬೇಕು ಎನ್ನುವುದು ನಟಿಯ ಆಗ್ರಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!