ಎನ್ ಸಿಪಿ ಬಳಿಕ ಕಾಂಗ್ರೆಸ್ ನಲ್ಲೂ ಬಂಡಾಯ? ಅಶೋಕ್ ಚವಾಣ್ ಬಿಜೆಪಿಯತ್ತ?

ಹೊಸದಿಗಂತ ಡಿಜಿಟಲ್ ಡೆಸ್ಕ್ :

ಮಹಾರಾಷ್ಟ್ರ ರಾಜಕಾರಣದಲ್ಲಿ ದಿನೇ ದಿನೇ ಹೊಸ ವಿದ್ಯಮಾನಗಳು ನಡೆಯುತ್ತಿದ್ದು, ಈಗಾಗಲೇ ಬಂಡಾಯವೆದ್ದ ಅಜಿತ್ ಪವಾರ್ ಶಿಂಧೆ ಸರಕಾರದತ್ತ ಹೆಜ್ಜೆ ಇಟ್ಟಿದ್ದು,
ಇದೀಗ ಕಾಂಗ್ರೆಸ್ ಪಕ್ಷದಲ್ಲೂ ಒಡಕಿನ ಮಾತುಗಳು ಕೇಳಿಬರುತ್ತಿವೆ.

ಪಕ್ಷದ ವಿರುದ್ಧ ಅಸಮಾಧಾನಗೊಂಡಿರುವ ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಚವಾಣ್ ಬಿಜೆಪಿ ಸೇರಲಿದ್ದಾರೆ ಎಂಬಂತಹ ಊಹಾಪೋಹಗಳು ಹರಿದಾಡುತ್ತಿವೆ.
ಈ ವದಂತಿಗಳಿಗೆ ಪುಷ್ಟಿ ನೀಡುವಂತೆ ರಾಜ್ಯ ಕಾಂಗ್ರೆಸ್ ಕೋರ್ ಕಮಿಟಿ ಸಭೆಯಿಂದಲೂ ಅಶೋಕ್ ಚವಾಣ್ ದೂರ ಉಳಿದರು ಎನ್ನಲಾಗಿತ್ತು.

ಆದ್ರೆ ನನ್ನ ಬಗೆ ಯಾರೂ ಈ ರೀತಿಯ ಸುದ್ದಿಗಳನ್ನು ಹರಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ನಾನು ಕೂಡಾ ಸಭೆಯಲ್ಲಿ ಪಾಲ್ಗೊಂಡಿದ್ದೆ. ಆದರೆ, ಪೂರ್ವ ನಿರ್ಧರಿತ ಸಭೆಯ ಕಾರಣದಿಂದ ಸಭೆಯಿಂದ ಬೇಗ ನಿರ್ಗಮಿಸಿದ್ದಾಗಿ ಅಶೋಕ್ ಚವಾಣ್ ತಿಳಿಸಿದ್ದಾರೆ.

ಈ ಮಧ್ಯೆ ಹಲವು ಕಾಂಗ್ರೆಸ್ ಶಾಸಕರು ಪಕ್ಷ ತೊರೆಯಲು ಬಯಸುತ್ತಿದ್ದಾರೆ ಎಂದು ಶಿವಸೇನೆ-ಶಿಂಧೆ ಬಣದ ಶಾಸಕ ಸಂಜಯ್ ಶಿರ್ಸಾತ್ ಹೇಳಿದ್ದಾರೆ. 16 ರಿಂದ 17 ಕಾಂಗ್ರೆಸ್ ಶಾಸಕರು ಹೊರಹೋಗಲು ಬಯಸಿದ್ದು, ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದ್ದಾರೆ. ಕಾಂಗ್ರೆಸ್ ಕೂಡ ವಿಭಜನೆಯಾಗಲಿದೆ ಎಂದು ಅವರು ಹೇಳಿದರು,

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!