ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಬಿಗ್ಬಾಸ್ ಸೀಸನ್ 11 ಶುರುವಾಗಿದೆ. ಸತ್ಯ ಸೀರಿಯಲ್ ನಟಿ ಗೌತಮಿ ಜಾಧವ್ ಅವರು ಎಂಟ್ರಿ ಕೊಟ್ಟಿದ್ದಾರೆ.
ನಟಿ ಗೌತಮಿ ಜಾಧವ್ ಒಂದೇ ಸೀರಿಯಲ್ ಮೂಲಕ ಸಾಕಷ್ಟು ಸುದ್ದಿಯಾಗಿ ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು. ವಿಶೇಷ ಏನಂದ್ರೆ ನಟಿ ಗೌತಮಿ ಜಾಧವ್ ಅವರು ಸತ್ಯ ಗೆಟಪ್ ಮೂಲಕವೇ ಬಿಗ್ ಬಾಸ್ ವೇದಿಕೆಗೆ ಬಂದಿದ್ದಾರೆ.
ಮೊದಲ ಎರಡು ಸ್ಪರ್ಧಿಗಳಾದ ಭವ್ಯಾ ಗೌಡ ಹಾಗೂ ಯಮುನಾ ಶ್ರೀನಿಧಿ ಅವರು ಗೌತಮಿ ಜಾಧವ್ ಅವರನ್ನು ನರಕಕ್ಕೆ ಕಳುಹಿಸಲು ನಿರ್ಧಾರ ಮಾಡಿದ್ದರು. ಆದರೆ ಬಿಗ್ ಬಾಸ್ ವೀಕ್ಷಕರ ವೋಟಿಂಗ್ ಆಧಾರದಲ್ಲಿ ನಟಿ ಗೌತಮಿ ಜಾಧವ್ ಅವರು ಸ್ವರ್ಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಗೌತಮಿ ಜಾಧವ್ ಅವರು ಸ್ಪರ್ಗಕ್ಕೆ ಹೋಗಬೇಕು ಅಂತ 1 ಲಕ್ಷ 16 ಸಾವಿರ ವೀಕ್ಷಕರು ವೋಟ್ ಮಾಡಿದ್ದಾರೆ.