ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ನಟಿ ಹನ್ಸಿಕಾ ಮೋಟ್ವಾನಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಟಾಲಿವುಡ್ ನಟಿ ಹನ್ಸಿಕಾ ಮೋಟ್ವಾನಿ ದಾಂಪತ್ಯ ಜೀವನಕ್ಕೆ ಕಾಲಿಡುವ ಸಂಬ್ರಮದಲ್ಲಿದ್ದು, ಉದ್ಯಮಿ ಸೊಹೈಲ್ ಜೊತೆ ಮದುವೆಯಾಗಲು ಸಿದ್ದತೆ ನಡೆಸುತ್ತಿದ್ದಾರೆ.

ಈಗಾಗಲೇ ನಿಶ್ಚಿತಾರ್ಥ ಮಾಡಿಕೊಂಡ ಜೋಡಿ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡುತ್ತಿದ್ದಾರೆ.

ಅದೇನೆಂದರೆ ಹನ್ಸಿಕಾ ಮೋಟ್ವಾನಿ ಮದುವೆಯನ್ನು ಲೈವ್ ಆಗಿ ನೋಡಬಹುದಾಗಿದ್ದು,ಮದುವೆ ವಿಡಿಯೋ ಹಕ್ಕನ್ನು ಒಟಿಟಿಗೆ ಮಾರಾಟ ಮಾಡಿದ್ದಾರಂತೆ.

ಹನ್ಸಿಕಾ ಮೋಟ್ವಾನಿಗೆ ಅಪಾರ ಅಭಿಮಾನಿಗಳ ಬಳಗವಿದೆ. ನೆಚ್ಚಿನ ನಟಿಯ ಮದುವೆ ನೋಡಲು ಅದೆಷ್ಟೋ ಅಭಿಮಾನಿಗಳು ಕಾಯ್ತಿದ್ದಾರೆ. ಹಾಗಾಗಿ ತಮ್ಮ ಮದುವೆಯನ್ನು ಓಟಿಟಿಯಲ್ಲಿ ಸ್ಟ್ರಿಮಿಂಗ್‌ ಮಾಡಲು ಯೋಚಿಸಿದ್ದಾರೆ. ಹನ್ಸಿಕಾ ಅವರ ಮದುವೆಯನ್ನು ಎಲ್ಲರೂ ಲೈವ್ ಆಗಿ ಓಟಿಟಿ ಮೂಲಕ ನೋಡಬಹುದಾಗಿದೆ.

ಹನ್ಸಿಕಾ ಮತ್ತು ಸೊಹೈಲ್ ಜೋಡಿಯ ಮದುವೆ ಜೈಪುರದ 450 ವರ್ಷಗಳ ಹಳೆಯ ಮುಂಡೋಟಾ ಕೋಟೆಯಲ್ಲಿ ನಡೆಯಲಿದೆ. ಡಿಸೆಂಬರ್ 4ರಂದು ಗುರುಹಿರಿಯರು, ಆಪ್ತರು ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಡಿಸೆಂಬರ್ 3ರಂದು ಮೆಹೆಂದಿ ಶಾಸ್ತ್ರ ನಡೆಯಲಿದೆ. ಈ ಸಂಭ್ರಮದ ಕ್ಷಣವನ್ನು ಫ್ಯಾನ್ಸ್ ಓಟಿಟಿ ಮೂಲಕ ಲೈವ್ ಆಗಿ ನೋಡಬಹುದಾಗಿದೆ.

ಇತ್ತೀಚಿಗೆ ಅನೇಕ ಸೆಲೆಬ್ರಿಟಿಗಳು ತಮ್ಮ ಮದುವೆ ವಿಡಿಯೋಗಳನ್ನು ಒಟಿಟಿಗೆ ಮಾರಾಟ ಮಾಡುತ್ತಿದ್ದು, ಬಾಲಿವುಡ್ ನಲ್ಲಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆ ವಿಡಿಯೋವನ್ನು ಸಹ ಒಟಿಟಿಗೆ ಸೇಲ್ ಮಾಡಲಾಗಿತ್ತು. ಸೌತ್ ನಲ್ಲಿ ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆ ವಿಡಿಯೋವನ್ನು ಸಹ ಒಟಿಟಿ ನೀಡಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!