‘ಇದನ್ನು ಕರ್ಮ ಅಂತಾರೆ’: ಅಖ್ತರ್‌ಗೆ ಬಿಸಿಮುಟ್ಟಿಸಿದ ಮೊಹಮದ್‌ ಶಮಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಟಿ20 ವಿಶ್ವಕಪ್ ಫೈನಲ್’ನಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನಕ್ಕೆ ಸೋಲು ಕಂಡಿದ್ದು, ಪಾಕಿಸ್ತಾನ ತಂಡದ ಹಾಲಿ ಆಟಗಾರರು ಬೇಸರ ವ್ಯಕ್ತಪಡಿಸಿದ್ದಾರೆ.

ಪಾಕ್ ಮಾಜಿ ಆಟಗಾರ ಶೋಯೆಬ್ ಅಖ್ತರ್ ಕೂಡ ತಂಡದ ಸೋಲಿಗೆ ಭಗ್ನವಾದ ಹೃದಯದ ಇಮೋಜಿ ಬಳಸಿ ಟ್ವೀಟ್‌ ಮಾಡಿದ್ದಾರೆ. ಅಖ್ತರ್‌ ಅರ್ ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ ಭಾರತದ ವೇಗಿ ಮೊಹಮದ್‌ ಶಮಿ,’ಕ್ಷಮಿಸಿ ಸಹೋದರ, ಇದಕ್ಕೆ ಕರ್ಮ ಎನ್ನತ್ತಾರೆ’ ಎಂದು ಬರೆದುಕೊಂಡಿದ್ದಾರೆ.

 

ಸೆಮಿಫೈನಲ್’ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಸೋತ ವೇಳೆ ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಪಾಕಿಸ್ತಾನಿ ಅಭಿಮಾನಿಗಳು ಮತ್ತು ಮಾಜಿ ಕ್ರಿಕೆಟಿಗರ ಅಗೌರವದ ಟ್ವಿಟ್ ಮಾಡಿದ್ದರು, ಇಂದು ಶಮಿ ಟ್ವೀಟ್ ಚಾಟಿ ಬೀಸಿದಂತಾಗಿದೆ.

ಶಮಿ ಟ್ವಿಟ್ ಗೆ ನೆಟ್ಟಿಗರು ಫಿದಾ ಆಗಿದ್ದು, ಸರಿಯಾಗಿ ಯಾರ್ಕರ್‌ ಹಾಕಿದ್ದೀರಿ ಎಂದು ಕಾಮೆಂಟ್‌ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!