ನಟಿ ಜಾಕ್ವೆಲಿನ್ ಗೆ ಬಂತು ಮತ್ತೊಂದು ಪತ್ರ: ನಿನ್ನ ಪ್ರೀತಿಗಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವೆ ಎಂದ ಸುಕೇಶ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಹುಕೋಟಿ ವಂಚನೆ ಪ್ರಕರಣದಲ್ಲಿ ಜೈಲಿನಲ್ಲಿರುವ ಆರೋಪಿ ಸುಕೇಶ್ ಚಂದ್ರಶೇಖರ್ (Sukesh Chandrasekhar) ತನ್ನ ಗೆಳತಿ,ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಗೆ ಮತ್ತೆ ಪತ್ರಬರೆದಿದ್ದಾನೆ.

ಈ ಹಿಂದೆ ಅನೇಕ ಬಾರಿ ಪತ್ರ ಬರೆದಿದ್ದ ಸುಕೇಶ್, ಈ ಬಾರಿ ಕೋಟಿ ಕೋಟಿ ಬಜೆಟ್ ನ ಯೋಜನೆಯನ್ನು ಪ್ರಸ್ತಾಪ ಮಾಡಿದ್ದಾರೆ.

ಜಾಕ್ವೆಲಿನ್ ಗೆ ಪ್ರಾಣಿಗಳ (Animal) ಮೇಲೆ ಅಪಾರ ಪ್ರೀತಿಯಂತೆ. ಅದರಲ್ಲೂ ನಾಯಿ, ಬೆಕ್ಕು, ಕುದುರೆಗಳು ಅಂದರೆ ಪ್ರಾಣವಂತೆ. ತನ್ನ ಗೆಳತಿಯ ಪ್ರಾಣಿ ಮೇಲಿನ ಪ್ರೀತಿಗಾಗಿ ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸುವುದಾಗಿ ಹೇಳಿದ್ದಾನೆ. ಸೆಪ್ಟಂಬರ್ 11 ರಿಂದ ಕಟ್ಟಡ ನಿರ್ಮಾಣ ಕಾಮಗಾರಿ ಶುರುವಾಗಲಿದ್ದು, ಮುಂದಿನ ವರ್ಷ ಆಗಸ್ಟ್ 11ಕ್ಕೆ ಲೋಕಾರ್ಪಣೆ ಮಾಡುವುದಾಗಿ ತಿಳಿಸಿದ್ದಾನೆ. ಇದು ಗೆಳತಿ ಹುಟ್ಟುಹಬ್ಬಕ್ಕಾಗಿ ಕೊಡುತ್ತಿರುವ ಉಡುಗೊರೆ ಎಂದು ಹೇಳಿಕೊಂಡಿದ್ದಾನೆ.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು ಬೆಂಗಳೂರಿನಲ್ಲಿ ನಿರ್ಮಾಣವಾಗಲಿದ್ದು, ಒಟ್ಟು 25 ಸಾವಿರ ಚದರಡಿ ವಿಸ್ತೀರ್ಣದಲ್ಲಿ ತಯಾರಾಗಲಿದೆ. ಈ ಆಸ್ಪತ್ರೆಗಾಗಿ ಸುಕೇಶ್ 25 ಕೋಟಿ ರೂಪಾಯಿ ವೆಚ್ಚ ಮಾಡಲಿದ್ದಾನೆ. ಈ ಆಸ್ಪತ್ರೆಯು ಉಚಿತವಾಗಿ ಕೆಲಸ ಮಾಡಲಿದೆಯಂತೆ. ನುರಿತು ವೈದ್ಯರು ಮತ್ತು ಅತ್ಯಾಧುನಿಕ ಉಪಕರಣಗಳನ್ನು ಹೊಂದಿರಲಿದೆ ಎಂದು ಪತ್ರದಲ್ಲಿ ಬರೆದಿದ್ದಾನೆ.

ಸುಕೇಶ್ ವಿರುದ್ಧವಾಗಿ ಜಾಕ್ವೆಲಿನ್ ಹಲವು ಬಾರಿ ನನಗೂ ಯಾವುದೇ ಸಂಬಂಧವಿಲ್ಲ. ಅವನಿಂದ ಯಾವುದೇ ಉಡುಗೊರೆಯನ್ನು ಪಡೆದಿಲ್ಲ ಎಂದು ತನಿಖಾಧಿಕಾರಿಗಳಿಗೆ ಜಾಕ್ವೆಲಿನ್ ಹೇಳಿದ್ದರೂ, ಪದೇ ಪದೇ ಈ ರೀತಿ ಪತ್ರವನ್ನು ಬರೆಯುವ ಮೂಲಕ ಜಾಕ್ವೆಲಿನ್ ನಿದ್ದೆ ಹಾಳು ಮಾಡುತ್ತಿದೆ ,

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!