ಮುಖಕ್ಕೆ ಸೂಜಿ ಚುಚ್ಚಿಸಿಕೊಂಡ ನಟಿ: ಯಾಕೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಟಾಲಿವುಡ್ ಬೆಡಗಿ ಮೆಹ್ರೀನ್ ಪೀರ್ಜಾದಾ ಸರಣಿ ಚಿತ್ರಗಳ ಮೂಲಕ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಅವರ ಚೊಚ್ಚಲ ಚಿತ್ರ ‘ಕೃಷ್ಣಗಾಡಿ ವೀರಪ್ರೇಮಗಾಧ’ ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿಯಾದ ಬಳಿಕ ಆಫರ್‌ಗಳ ಮಹಾಪೂರವೇ ಹರಿದು ಬಂದಿತ್ತು. ಆದರೆ ಸತತ ಸೋಲುಗಳಿಂದ ಬಳಲುತ್ತಿದ್ದ ಮೆಹ್ರೀನ್ ಎಫ್2 ಚಿತ್ರದ ಮೂಲಕ ಮತ್ತೆ ಹೈಪ್‌ ಗಿಟ್ಟಿಸಿಕೊಂಡರು. ಮತ್ತು ಈ ಸಿನಿಮಾದ ಯಶಸ್ಸಿನಿಂದ ಈ ಚೆಲುವೆ ಈಗ ತುಂಬಾ ಸೆಲೆಕ್ಟಿವ್ ಸಿನಿಮಾಗಳನ್ನು ಮಾಡುತ್ತಿದ್ದಾರೆ.

ಆದರೆ ಇತ್ತೀಚೆಗೆ ಮೆಹ್ರೀನ್‌ಗೆ ಸಂಬಂಧಿಸಿದ ಫೋಟೋವೊಂದು ವೈರಲ್ ಆಗಿದೆ. ಮೆಹ್ರೀನ್ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತನ್ನ ಮುಖದ ತುಂಬೆಲ್ಲಾ ಸೂಜಿ ಚುಚ್ಚಿಸಿಕೊಂಡಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾಳೆ. ಇದರಿಂದ ಆಕೆಯ ಅಭಿಮಾನಿಗಳು ಬೆಚ್ಚಿ ಬಿದ್ದಿದ್ದಾರೆ. ಮೆಹ್ರೀನ್‌ಗೆ ಏನಾಯಿತು ಎಂದು ಚರ್ಚಿಸುತ್ತಿದ್ದಾರೆ. ಸದ್ಯ ಈ ನಟಿ ಅಕ್ಯುಪಂಕ್ಚರ್ ಎಂಬ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದಾಳೆ.

ಈ ಚಿಕಿತ್ಸೆಯಿಂದ ಮುಖ ಕಾಂತಿಯುತವಾಗುತ್ತದೆ ಎನ್ನುತ್ತಾರೆ ಮೆಹ್ರೀನ್. ಆದರೆ ಈ ಫೋಟೋ ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಂತೂ ನಿಜ. ವಯಸ್ಸು ಬಾರ್ ಆಗಿರುವ ಮಹಿಳೆಯರು ಹೆಚ್ಚಾಗಿ ಈ ಚಿಕಿತ್ಸೆಗೆ ಒಳಗಾಗುತ್ತಾರೆ. ಆದರೆ 27ರ ಹರೆಯದಲ್ಲಿ ಮೆಹ್ರೀನ್ ಯಾಕೆ ಈ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದಾರೆ ಎಂದು ಪ್ರಶ್ನಿಸುತ್ತಿದ್ದಾರೆ. ಮತ್ತು ಇದಕ್ಕೆ ಮೆಹ್ರೀನ್ ಯಾವ ರೀತಿಯ ಉತ್ತರ ನೀಡುತ್ತಾರೋ ನೋಡೋಣ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!