ಸಿಸಿಟಿವಿ ಕದ್ದಿದ್ದು ಕಳ್ಳರಲ್ಲ, ಕೋತಿ :ವಿಷಯ ತಿಳಿದು ತಲೆ ಮೇಲೆ ಕೈ ಹೊತ್ತು ಕುಳಿತ ಮಾಲೀಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವೈನ್ ಶಾಪ್ ನಲ್ಲಿ ಕುಡುಕರ ಕೈಯಿಂದ ಬಿಯರ್ ಬಾಟಲ್ ಗಳನ್ನು ಕಿತ್ತುಕೊಂಡ ಕೋತಿ ಬಗ್ಗೆ ಕೇಳಿದ್ದೇವೆ. ಎಣ್ಣೆ ಕುಎಇದು ತೂರಾಡಿದ ಕೋತಿ ಬಗ್ಗೆ ಕೇಳಿದ್ದೇವೆ. ಆದರೆ, ಕನ್ಯಾಕುಮಾರಿಯಲ್ಲಿ ಕೋತಿಯೊಂದು ಸಿಸಿಟಿವಿ ಕ್ಯಾಮೆರಾಗಳನ್ನು ಕದ್ದಿದೆ. ಅಂಗಡಿಯೊಂದರಲ್ಲಿ ಭದ್ರತೆಗಾಗಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಕಳ್ಳತನ ಮಾಡಿದ್ದು, ಒಂದಲ್ಲ ಎರಡಲ್ಲ 13 ಸಿಸಿಟಿವಿ ಕ್ಯಾಮೆರಾಗಳನ್ನು ಎತ್ತೊಯ್ದಿದೆ.

ಕನ್ಯಾಕುಮಾರಿಯ ಪ್ಲೈವುಡ್ ಕಂಪನಿಯ ಮಾಲೀಕರು ಪ್ಲೈವುಡ್ ಅಂಗಡಿಯ ಆವರಣದಲ್ಲಿ ಏನಾಗುತ್ತಿದೆ ಎಂದು ತಿಳಿಯಲು ತಮ್ಮ ಅಂಗಡಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ಈ ವೇಳೆ ಸಿಸಿಟಿವಿ ಕ್ಯಾಮೆರಾಗಳು ಕಣ್ಮರೆಯಾಗುತ್ತಿರುವುದು ಅಚ್ಚರಿ ಮೂಡಿಸಿದೆ. ಯಾರೋ ಕಳ್ಳರು ಕಳ್ಳತನ ಮಾಡುವ ಯೋಜನೆಯೊಂದಿಗೆ ಈ ಕೆಲಸ ಮಾಡಿರಬಹುದು ಎಂದು ಶಂಕಿಸಿದ್ದಾರೆ. ದೃಶ್ಯಾವಳಿಗಳನ್ನು ಪರಿಶೀಲಿಸಿದ ಬಳಿಕ ಸಿಸಿಟಿವಿ ಕ್ಯಾಮೆರಾಗಳನ್ನು ಯಾರು ಕದ್ದಿದ್ದಾರೆಂದು ನೋಡಿದ ಮಾಲೀಕರು ತಲೆ ಮೇಲೆ ಕೈ ಹೊತ್ತು ಕುಳಿತರು.

ಕೋತಿಯೊಂದು ಸಿಸಿಟಿವಿ ಕ್ಯಾಮೆರಾಗಳನ್ನು ಕದಿಯುತ್ತಿರುವ ದೃಶ್ಯಗಳಿವೆ. ಕಳ್ಳತನ ಪತ್ತೆಗೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳು ಒಂದರ ಹಿಂದೆ ಒಂದರಂತೆ ಕಳ್ಳತನವಾಗುತ್ತಿರುವುದರಿಂದ ಮಾಲೀಕರು ಕಂಗಾಲಾಗಿದ್ದಾರೆ. ಕ್ಯಾಮರಾಗಳನ್ನು ಕದಿಯುತ್ತಿದ್ದ ಕಳ್ಳನನ್ನು ಹುಡುಕಲು ಮುಂದಾದಾಗ, ಆ ಕಳ್ಳನ ಕೋತಿ ಎಂದು ತಿಳಿದು ಬೆಚ್ಚಿಬಿದ್ದರು. ಮಾಲೀಕರು ಇದುವರೆಗೆ 13 ಸಿಸಿಟಿವಿ ಕ್ಯಾಮೆರಾಗಳನ್ನು ಕಳೆದುಕೊಂಡಿದ್ದಾರೆ. ಕೋತಿ ಸಿಸಿಟಿವಿ ಕ್ಯಾಮೆರಾಗಳನ್ನು ಕದ್ದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!